×
Ad

ಬಾಂಗ್ಲಾ ಮಾಜಿ ಪ್ರಧಾನಿ ಹಸೀನಾ ಅವರ ಢಾಕಾದ ಮನೆ ಇನ್ನು ಮ್ಯೂಸಿಯಂ

Update: 2025-08-04 21:36 IST

 ಶೇಖ್ ಹಸೀನಾ | PTI 

ಢಾಕಾ, ಆ.4: ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರ ಈ ಹಿಂದಿನ ಸರ್ಕಾರಿ ನಿವಾಸ `ಜನ ಭವನ'ವನ್ನು ಮ್ಯೂಸಿಯಂ ಆಗಿ ಬದಲಾಯಿಸಲು ಮಧ್ಯಂತರ ಸರಕಾರ ನಿರ್ಧರಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

`ಜುಲೈ ಕ್ರಾಂತಿಯ ಸ್ಮರಣಾರ್ಥ ಮ್ಯೂಸಿಯಂ' ಎಂದು ಹೆಸರಿಸುವ ಸಾಧ್ಯತೆಯಿದೆ. ಶೇಖ್ ಹಸೀನಾ ಅವರ ತಂದೆ ಶೇಖ್ ಮುಜೀಬುರ್ ರಹ್ಮಾನ್ ನಿರ್ಮಿಸಿದ್ದು ಇದು ಬಾಂಗ್ಲಾ ಸರಕಾರದ ಮುಖ್ಯಸ್ಥರ ಅಧಿಕೃತ ನಿವಾಸವಾಗಿತ್ತು. ಹಸೀನಾರ 15 ವರ್ಷದ ಅಧಿಕಾರಾವಧಿಯಲ್ಲಿ ಅವರು ಈ ನಿವಾಸದಲ್ಲಿ ನೆಲೆಸಿದ್ದರು.

ಹಸೀನಾ ಅವರ `ದುರಾಡಳಿತವನ್ನು' ಪ್ರತಿನಿಧಿಸುವ ಮ್ಯೂಸಿಯಂ ಆಗಿ `ಜನ ಭವನವನ್ನು' ಪರಿವರ್ತಿಸಲಾಗುವುದು. ಇದನ್ನು ಹಸೀನಾ ಸರಕಾರ ಪದಚ್ಯುತಗೊಂಡ ವಾರ್ಷಿಕ ದಿನವಾದ ಆಗಸ್ಟ್ 5ರಂದು ಉದ್ಘಾಟಿಸಲಾಗುವುದು ಎಂದು ಮಧ್ಯಂತರ ಸರಕಾರದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನುಸ್ ಘೋಷಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News