ಬಾಂಗ್ಲಾ: ಜಮಾತೆ ಇಸ್ಲಾಮಿ ಪಕ್ಷದ ನೋಂದಣಿ ಪುನಃಸ್ಥಾಪನೆ
Update: 2025-06-01 22:38 IST
Photo Credit: AFP
ಢಾಕ: ಜಮಾತೆ ಇಸ್ಲಾಮಿ ಪಕ್ಷದ ನೋಂದಣಿಯನ್ನು ಮರುಸ್ಥಾಪಿಸುವಂತೆ ಬಾಂಗ್ಲಾದೇಶದ ಸುಪ್ರೀಂಕೋರ್ಟ್ ರವಿವಾರ ಆದೇಶಿಸಿರುವುದಾಗಿ ವರದಿಯಾಗಿದೆ.
ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರ ಆಡಳಿತವು 2013ರಲ್ಲಿ ಜಮಾತೆ ಇಸ್ಲಾಮಿ ಪಕ್ಷದ ನೋಂದಣಿಯನ್ನು ರದ್ದುಗೊಳಿಸಿ ನಿಷೇಧ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯನ್ನು ಪುರಸ್ಕರಿಸಿದ ಹೈಕೋರ್ಟ್, ನೋಂದಣಿ ಮರುಸ್ಥಾಪನೆಗೆ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗಕ್ಕೆ ಸೂಚಿಸಿದೆ.
ಇದರೊಂದಿಗೆ ಜಮಾತೆ ಇಸ್ಲಾಮಿ ಪಕ್ಷಕ್ಕೆ ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ದೊರಕಿದಂತಾಗಿದೆ.