ತುರ್ತು ಗರ್ಭಪಾತದ ಬಗ್ಗೆ ಬೈಡನ್ ಅವಧಿಯ ಮಾರ್ಗಸೂಚಿ ರದ್ದು
Update: 2025-06-04 21:42 IST
ಟ್ರಂಪ್ | PC : PTI
ವಾಷಿಂಗ್ಟನ್: ವೈದ್ಯಕೀಯವಾಗಿ ಅಗತ್ಯವಿದ್ದರೆ ತುರ್ತು ಗರ್ಭಪಾತಕ್ಕೆ ಅವಕಾಶ ಮಾಡಿಕೊಡುವ ಮಾಜಿ ಅಧ್ಯಕ್ಷ ಜೋ ಬೈಡನ್ ಅಧಿಕಾರಾವಧಿಯ ಆರೋಗ್ಯ ಮಾರ್ಗಸೂಚಿಯನ್ನು ರದ್ದುಗೊಳಿಸುವುದಾಗಿ ಟ್ರಂಪ್ ಆಡಳಿತ ಘೋಷಿಸಿದೆ.
1986ರ `ಎಮರ್ಜೆನ್ಸಿ ಮೆಡಿಕಲ್ ಟ್ರೀಟ್‍ಮೆಂಟ್ ಆ್ಯಂಡ್ ಆ್ಯಕ್ಟಿವ್ ಲೇಬರ್ ಆ್ಯಕ್ಟ್(ಇಎಂಟಿಎಎಲ್‍ಎ) ಕಾಯ್ದೆಯಡಿ ಬೈಡನ್ ಆಡಳಿತ ಹೊರಡಿಸಿದ ಮಾರ್ಗಸೂಚಿಯು ಈಗಿನ ಆಡಳಿತದ ಕಾರ್ಯನೀತಿಯನ್ನು ಪ್ರತಿಬಿಂಬಿಸುವುದಿಲ್ಲ. ಆದ್ದರಿಂದ ಈ ಮಾರ್ಗಸೂಚಿಯನ್ನು 2025ರ ಮೇ 29ರಿಂದ ಅನ್ವಯಿಸುವಂತೆ ರದ್ದುಗೊಳಿಸಲಾಗಿದೆ' ಎಂದು ಹೇಳಿಕೆ ತಿಳಿಸಿದೆ.