×
Ad

ಬೈಡನ್, ಟ್ರಂಪ್ ಮುಂಗೋಪಿ ಮುದುಕರು' : ನಿಕ್ಕಿ ಹ್ಯಾಲೆ

Update: 2024-02-02 22:44 IST

ವಾಷಿಂಗ್ಟನ್ : ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ತನ್ನ ಪ್ರಮುಖ ವಿರೋಧಿಗಳಾದ ಹಾಲಿ ಅಧ್ಯಕ್ಷ ಜೋ ಬೈಡನ್ ಹಾಗೂ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಭಾರತೀಯ ಅಮೆರಿಕನ್, ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿಯ ರೇಸ್‍ನಲ್ಲಿರುವ ನಿಕ್ಕಿ ಹ್ಯಾಲೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ನಿಕ್ಕಿ ಹ್ಯಾಲೆ ಅವರ ಚುನಾವಣಾ ಪ್ರಚಾರ ಅಭಿಯಾನದ ಅಂಗವಾಗಿ ಬೈಡನ್ ಮತ್ತು ಟ್ರಂಪ್‍ರನ್ನು ಮುಂಗೋಪಿ ಮುದುಕರು ಎಂದು ಲೇವಡಿ ಮಾಡುವ ಸರಣಿ ಜಾಹೀರಾತು ಪ್ರಕಟಿಸಲಾಗಿದೆ.

77 ವರ್ಷದ ಡೊನಾಲ್ಡ್ ಟ್ರಂಪ್ ಹಾಗೂ 52 ವರ್ಷದ ನಿಕ್ಕಿ ಹ್ಯಾಲೆ ನಡುವೆ ರಿಪಬ್ಲಿಕನ್ ಅಭ್ಯರ್ಥಿಯಾಗಲು ಸ್ಪರ್ಧೆ ನಡೆಯುತ್ತಿದೆ. 81 ವರ್ಷದ ಜೋ ಬೈಡನ್ ಮತ್ತೆ ಅಧ್ಯಕ್ಷರಾಗಿ ಪುನರಾಯ್ಕೆ ಬಯಸಿದ್ದಾರೆ. 1993ರ ಜನಪ್ರಿಯ ಹಾಲಿವುಡ್ ಸಿನೆಮ `ಗ್ರಂಪಿ ಓಲ್ಡ್ ಮೆನ್'(ಮುಂಗೋಪದ ಮುದುಕರು)ನ ಜಾಹೀರಾತು ಪೋಸ್ಟರಿನ ಪರಿಷ್ಕೃತ ಆವೃತ್ತಿಯನ್ನು ತನ್ನ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಹ್ಯಾಲೆ, ಅದರಲ್ಲಿ ಬೈಡನ್ ಮತ್ತು ಟ್ರಂಪ್ ಫೋಟೋವನ್ನು ಬಳಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News