×
Ad

ನಾಪತ್ತೆಯಾಗಿದ್ದ ಇಬ್ಬರು ಭಾರತೀಯ ಪ್ರವಾಸಿಗರ ಮೃತದೇಹ ಪತ್ತೆ

Update: 2025-11-10 22:02 IST

Photo: ndtv

ಕಠ್ಮಂಡು, ನ.10: ನೇಪಾಳದಲ್ಲಿ ಅಕ್ಟೋಬರ್ 10ರಿಂದ ನಾಪತ್ತೆಯಾಗಿದ್ದ ಇಬ್ಬರು ಭಾರತೀಯ ಪ್ರವಾಸಿಗರ ಮೃತದೇಹವನ್ನು ಮನಾಂಗ್ ಜಿಲ್ಲೆಯಲ್ಲಿ ನೇಪಾಳದ ಭದ್ರತಾ ಪಡೆ ಪತ್ತೆಹಚ್ಚಿರುವುದಾಗಿ ಅಧಿಕಾರಿಗಳನ್ನು ಉಲ್ಲೇಖಿಸಿ ಎಎನ್‍ಐ ವರದಿ ಮಾಡಿದೆ.

ಅಕ್ಟೋಬರ್ 20ರಂದು ಮಲೆರಿಪ ಮಠಕ್ಕೆ ಭೇಟಿ ನೀಡಲು ತೆರಳಿದ್ದ 52 ವರ್ಷದ ಜಿಗ್ನೇಶ್ ಕುಮಾರ್ ಲಲ್ಲೂಭಾಯ್ ಪಟೇಲ್ ಹಾಗೂ ಅವರ ಪುತ್ರಿ 17 ವರ್ಷದ ಪ್ರಿಯಾಂಶಾ ಕುಮಾರಿ ನಾಪತ್ತೆಯಾಗಿದ್ದರು. ಸುಮಾರು 2 ವಾರಗಳ ಶೋಧ ಕಾರ್ಯಾಚರಣೆಯ ಬಳಿಕ ಮಠದ ಸಮೀಪ ಹಿಮದಲ್ಲಿ ಹೂತುಹೋಗಿದ್ದ ಮೃತದೇಹಗಳನ್ನು ಪತ್ತೆಹಚ್ಚಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News