ಹಮಾಸ್ ಹಸ್ತಾಂತರಿಸಿರುವ ಒತ್ತೆಯಾಳುವಿನ ಮೃತದೇಹದ ಗುರುತು ಪತ್ತೆ
Update: 2025-11-06 20:46 IST
Photo Credit : aljazeera.com
ಟೆಲ್ ಅವೀವ್ : ಹಮಾಸ್ ಹಸ್ತಾಂತರಿಸಿರುವ ಒತ್ತೆಯಾಳುವಿನ ಮೃತದೇಹವನ್ನು ತಾಂಝಾನಿಯದ ವಿದ್ಯಾರ್ಥಿ 21 ವರ್ಷದ ಜೋಶುವ ಮೊಲೇಲ್‌ರದ್ದು ಎಂಬುದಾಗಿ ಗುರುತಿಸಲಾಗಿದೆ. ಅವರ ಕುಟುಂಬಕ್ಕೆ ಮಾಹಿತಿ ನೀಡಲಾಗಿದೆ ಎಂದು ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಹಾಕಿದ ಸಂದೇಶವೊಂದರಲ್ಲಿ ಇಸ್ರೇಲ್ ಪ್ರಧಾನಿ ಕಚೇರಿ ತಿಳಿಸಿದೆ.
ಆರು ಒತ್ತೆಯಾಳುಗಳ ಮೃತದೇಹಗಳು ಈಗಲೂ ಗಾಝಾದಲ್ಲಿದೆ ಎಂಬುದಾಗಿ ಭಾವಿಸಲಾಗಿದೆ. ಅವುಗಳನ್ನು ಹಸ್ತಾಂತರಿಸಿದರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯಸ್ಥಿಕೆಯ ಯುದ್ಧವಿರಾಮದ ಮೊದಲ ಹಂತ ಪೂರ್ಣಗೊಂಡಂತಾಗುತ್ತದೆ. ಗಾಝಾದಲ್ಲಿ ಸಂಭವಿಸಿರುವ ವ್ಯಾಪಕ ವಿನಾಶದಿಂದಾಗಿ ಮೃತದೇಹಗಳನ್ನು ಪತ್ತೆಹಚ್ಚುವ ಕಾರ್ಯಕ್ಕೆ ಭಾರೀ ಹಿನ್ನಡೆಯಾಗಿದೆ ಎಂದು ಹಮಾಸ್ ಹೇಳಿದೆ.