ಬೋಯಿಂಗ್ ಈಗ ಚೀನಾಕ್ಕೂ ಹಾರಬಹುದು!
Update: 2025-05-13 20:26 IST
PC : Boeing 777X
ಬೀಜಿಂಗ್: ಅಮೆರಿಕ ಮತ್ತು ಚೀನಾ ತಾತ್ಕಾಲಿಕವಾಗಿ ಸುಂಕ ಕಡಿಮೆಗೊಳಿಸಲು ಸಮ್ಮತಿಸಿದ ಬಳಿಕ ದೇಶೀಯ ವಿಮಾನಯಾನ ಸಂಸ್ಥೆಗಳು ಹೊಸ ಬೋಯಿಂಗ್ ವಿಮಾನಗಳನ್ನು ಖರೀದಿಸುವ ಮೇಲಿದ್ದ ನಿಷೇಧವನ್ನು ಚೀನಾ ತೆರವುಗೊಳಿಸಿರುವುದಾಗಿ ವರದಿಯಾಗಿದೆ.
ಸುಂಕ ಪೈಪೋಟಿಯ ಹಿನ್ನೆಲೆಯಲ್ಲಿ ಅಮೆರಿಕದ ಬೋಯಿಂಗ್ ವಿಮಾನಗಳನ್ನು ಖರೀದಿಸುವುದನ್ನು ಚೀನಾ ವಿಮಾನಯಾನ ಸಂಸ್ಥೆಗಳು ನಿಲ್ಲಿಸಿರುವುದಾಗಿ ಕಳೆದ ತಿಂಗಳು ಬೋಯಿಂಗ್ ವಿಮಾನಯಾನ ಸಂಸ್ಥೆ ದೃಢಪಡಿಸಿತ್ತು. ಇದೀಗ ಸುಂಕ ಸಮರಕ್ಕೆ 90 ದಿನಗಳ ವಿರಾಮ ನೀಡಲು ಎರಡೂ ದೇಶಗಳು ಒಪ್ಪಿರುವ ಕಾರಣ ಸ್ಥಳೀಯ ವಿಮಾನಯಾನ ಸಂಸ್ಥೆಗಳು ಬೋಯಿಂಗ್ ವಿಮಾನಗಳನ್ನು ಖರೀದಿಸಬಹುದು ಎಂದು ಚೀನಾದ ಅಧಿಕಾರಿಗಳು ಸೂಚಿಸಿರುವುದಾಗಿ ಬ್ಲೂಮ್‍ಬರ್ಗ್ ನ್ಯೂಸ್ ಮಂಗಳವಾರ ವರದಿ ಮಾಡಿದೆ. 2025ರಲ್ಲಿ ಸುಮಾರು 50 ವಿಮಾನಗಳನ್ನು ಚೀನಾಕ್ಕೆ ಮಾರಾಟ ಮಾಡಲು ಬೋಯಿಂಗ್ ಸಂಸ್ಥೆ ಯೋಜಿಸಿತ್ತು ಎಂದು ಸಂಸ್ಥೆಯ ಸಿಇಒ ಕೆಲ್ಲಿ ಆರ್ಟ್‍ಬರ್ಗ್ ಕಳೆದ ತಿಂಗಳು ಹೇಳಿದ್ದರು.