×
Ad

ಕಮರಿಗೆ ಉರುಳಿದ ಬಸ್: 17 ಮಂದಿ ಮೃತ್ಯು

Update: 2023-08-04 22:36 IST

ಸಾಂದರ್ಭಿಕ ಚಿತ್ರ.

ಮೆಕ್ಸಿಕೊ ಸಿಟಿ: ಮೆಕ್ಸಿಕೋದ ಪಶ್ಚಿಮ ಪ್ರಾಂತದಲ್ಲಿ ಪ್ರಯಾಣಿಕರಿಂದ ತುಂಬಿದ್ದ ಬಸ್ಸೊಂದು ಹೆದ್ದಾರಿ ಪಕ್ಕದ ಕಮರಿಗೆ ಉರುಳಿಬಿದ್ದು ಮೂವರು ಮಕ್ಕಳು ಸೇರಿದಂತೆ ಕನಿಷ್ಟ 17 ಮಂದಿ ಮೃತಪಟ್ಟಿದ್ದಾರೆ. ಇತರ 22 ಮಂದಿ ಗಾಯಗೊಂಡಿದ್ದಾರೆ. 6 ಭಾರತೀಯರೂ ಬಸ್ಸಿನಲ್ಲಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನಯಾರಿಟ್ ರಾಜ್ಯದ ರಾಜಧಾನಿ ಟೆಪಿಕ್‍ನ ಹೊರವಲಯದ ಬರಾಂಕಾ ಬ್ಲಾಂಕಾ ನಗರದ ಬಳಿ ಸುಮಾರು 40 ಪ್ರಯಾಣಿಕರಿದ್ದ ಬಸ್ಸು ರಸ್ತೆ ಪಕ್ಕದ ಸುಮಾರು 50 ಮೀಟರ್‍ನಷ್ಟು ಆಳದ ಕಡಿದಾದ ಕಮರಿಗೆ ಉರುಳಿಬಿದ್ದಿರುವುದರಿಂದ ರಕ್ಷಣಾ ಕಾರ್ಯಾಚರಣೆ ಕಷ್ಟಕರವಾಗಿದೆ ಎಂದು ನಯಾರಿಟ್ ರಾಜ್ಯದ ಭದ್ರತೆ ಮತ್ತು ನಾಗರಿಕ ರಕ್ಷಣಾ ಇಲಾಖೆಯ ಕಾರ್ಯದರ್ಶಿ ಜಾರ್ಜ್ ಬೆನಿಟೊ ರಾಡ್ರಿಗಸ್ ಹೇಳಿದ್ದಾರೆ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News