ಕೆನಡಾ | ಭಾರತೀಯ ಕಾರ್ಮಿಕನ ವಿರುದ್ಧ ಜನಾಂಗೀಯ ನಿಂದನೆ
Update: 2025-10-27 21:34 IST
Screengrab : X
ಒಂಟಾರಿಯೊ, ಅ.27: ಕೆನಡಾದ ಒಂಟಾರಿಯೊ ಪ್ರಾಂತದ ಓಕ್‍ವಿಲ್ಲೆ ನಗರದ ರೆಸ್ಟಾರೆಂಟ್ ಒಂದರಲ್ಲಿ ಭಾರತೀಯ ಕಾರ್ಮಿಕನನ್ನು ಜನಾಂಗೀಯವಾಗಿ ನಿಂದಿಸಿದ ಘಟನೆ ವರದಿಯಾಗಿದೆ.
ಬಿಳಿಯ ಯುವಕನೊಬ್ಬ ರೆಸ್ಟಾರೆಂಟ್‍ನ ಸಿಬ್ಬಂದಿಯನ್ನು ಹೀನಾಯವಾಗಿ ನಿಂದಿಸಿದ್ದು `ನಿನ್ನ ದೇಶಕ್ಕೆ ಯಾಕೆ ಹಿಂತಿರುಗುತ್ತಿಲ್ಲ' ಎಂದು ಕಿರುಚಿದ್ದಾನೆ. ಈ ಘಟನೆಯ ವೀಡಿಯೊವನ್ನು ಅಲ್ಲಿದ್ದ ಮಹಿಳೆಯೊಬ್ಬರು ಮೊಬೈಲ್ ನಲ್ಲಿ ರೆಕಾರ್ಡ್ ಮಾಡುತ್ತಿದ್ದಾಗ ಆಕೆಯತ್ತ ಆಕ್ರಮಣಕಾರಿಯಾಗಿ ನುಗ್ಗಿ ಆಕೆಯನ್ನೂ ನಿಂದಿಸಿದ್ದಾನೆ. ಎರಡೂ ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು ವ್ಯಾಪಕ ಖಂಡನೆ, ಟೀಕೆ ವ್ಯಕ್ತವಾಗಿದ್ದರೂ ಸ್ಥಳೀಯ ಪೊಲೀಸರು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ವರದಿಯಾಗಿದೆ.
""Go back to your own country you stinky ass Indian ""
— Debbie Bloodclot. (@bettybloodclot) October 27, 2025
Canadian youth aren't stupid, know who's taking their jobs pic.twitter.com/09hUD3QM14