×
Ad

ಕೆಳ, ಮಧ್ಯಮ ಆದಾಯದ ದೇಶಗಳ ಮಕ್ಕಳಿಗೆ ಉಚಿತ ಕ್ಯಾನ್ಸರ್ ಔಷಧಿ ಪೂರೈಕೆ : ಡಬ್ಲ್ಯುಎಚ್‌ಓನಿಂದ ಹೊಸ ಯೋಜನೆ ಆರಂಭ

Update: 2025-02-11 23:26 IST

ಜಿನೇವಾ: ಕೆಳ ಮತ್ತು ಮಧ್ಯಮ ಆದಾಯವರ್ಗದ ದೇಶಗಳಲ್ಲಿ ವಾಸವಾಗಿರುವ ಸಾವಿರಾರು ಕ್ಯಾನ್ಸರ್‌ಪೀಡಿತ ಮಕ್ಕಳಿಗೆ ಉಚಿತವಾಗಿ ಕಾನ್ಸರ್ ಔಷಧಿಗಳನ್ನು ಒದಗಿಸಲು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಓ) ಮಂಗಳವಾರ ನೂತನ ವೇದಿಕೆಯೊಂದನ್ನು ಆರಂಭಿಸಿದೆ.

ಈ ಯೋಜನೆಯಡಿ ಮೊದಲಿಗೆ ಮಂಗೋಲಿಯಾ ಹಾಗೂ ಉಜ್ಭೇಕಿಸ್ತಾನ ದೇಶಗಳಿಗೆ ಕ್ಯಾನ್ಸರ್ ಔಷಧಿಗಳನ್ನು ಸರಬರಾಜು ಮಾಡಲಾಗಿದೆ. ಶೀಘ್ರದಲ್ಲೇ ಈಕ್ವೆಡಾರ್,ಜೋರ್ಡಾನ್, ನೇಪಾಳ ಹಾಗೂ ಝಾಂಬಿಯಾ ದೇಶಗಳಿಗೂ ಔಷಧಿಯನ್ನು ಪೂರೈಕೆಯಾಗಲಿದೆ ಎಂದು ಡಬ್ಲ್ಯುಎಚ್‌ಓ ಮೂಲಗಳು ತಿಳಿಸಿವೆ.

ಈ ಆರು ರಾಷ್ಟ್ರಗಳಲ್ಲಿರುವ 5ಸಾವಿರಕ್ಕೂ ಅಧಿಕ ಕ್ಯಾನ್ಸರ್ ಪೀಡಿತ ಮಕ್ಕಳಿಗೆ ಈ ಔಷಧಿಗಳು ತಲುಪುವ ನಿರೀಕ್ಷೆಯಿದೆ.

ಕಳೆ ಹಾಗೂ ಮಧ್ಯಮ ಆದಾಯದ ದೇಶಗಳಲ್ಲಿ ಬಾಲ್ಯದ ಕಾನ್ಸರ್ ಕಾಯಿಲೆಯಿಂದ ಬದುಕುಳಿಯುವರ ಪ್ರಮಾಣವು 30 ಶೇಕಡಕ್ಕಿಂತಲೂ ಕಡಿಮೆಯೆಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಆದರೆ ಅಧಿಕ ಆದಾಯದ ದೇಶಗಳಲ್ಲಿ ಈ ಕಾಯಿಲೆಯಿಂದ ಬದುಕುಳಿಯುವ ಮಕ್ಕಳ ಸಂಖ್ಯೆ ಸುಮಾರು 80 ಶೇ. ಆಗಿದೆಯೆಂದು ಡಬ್ಲ್ಯುಎಚ್‌ಓ ತಿಳಿಸಿದೆ.

ಮುಂದಿನ 5-7 ವರ್ಷಗೊಳಗೆ 50ಕ್ಕೂ ಅಧಿಕ ದೇಶಗಳ 1.20 ಲಕ್ಷ ಮಕ್ಕಳಿಗೆ ಕ್ಯಾನ್ಸರ್ ಔಷಧಿಗಳನ್ನು ಉಚಿತವಾಗಿ ಒದಗಿಸುವ ಉದ್ದೇಶವನ್ನು ತಾನು ಹೊಂದಿರುವುದಾಗಿ ಅದು ಹೇಳಿದೆ.

ಪ್ರತಿವರ್ಷ ಜಗತ್ತಿನಾದ್ಯಂತ ಸುಮಾರು 4 ಲಕ್ಷ ಮಕ್ಕಳು ಕ್ಯಾನ್ಸರ್ ಪೀಡಿತರಾಗುತ್ತಾರೆಂದು ವರದಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News