ಬ್ರಿಟನ್ ರಾಜ ಚಾರ್ಲ್ಸ್ ಗೆ ಕ್ಯಾನ್ಸರ್: ವರದಿ
Update: 2024-02-06 22:09 IST
Photo:NDTV
ಲಂಡನ್ : ಬ್ರಿಟನ್ ರಾಜ ಚಾರ್ಲ್ಸ್ ಕ್ಯಾನ್ಸರ್‍ನಿಂದ ಬಳಲುತ್ತಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಬಂಕಿಂಗ್ಹಾಮ್ ಅರಮನೆಯ ಮೂಲಗಳು ಹೇಳಿವೆ.
ಇತ್ತೀಚೆಗೆ ರಾಜ ಚಾರ್ಲ್ಸ್ ಅವರ ಪ್ರಾಸ್ಪೇಟ್ ಗ್ರಂಥಿ ಹಿಗ್ಗಿರುವ ಸಮಸ್ಯೆಯ ಬಗ್ಗೆ ಆರೋಗ್ಯ ತಪಾಸಣೆಯ ಸಂದರ್ಭ ಮತ್ತೊಂದು ಸಮಸ್ಯೆ ಪತ್ತೆಯಾಗಿದ್ದು ಇದು ಕ್ಯಾನ್ಸರ್ ಎಂಬುದು ದೃಢಪಟ್ಟಿದ್ದು ಅವರು ತಮ್ಮ ಎಲ್ಲಾ ಸಾರ್ವಜನಿಕ ಕಾರ್ಯಕ್ರಮ, ಸಮಾರಂಭಗಳನ್ನು ರದ್ದುಗೊಳಿಸಿದ್ದಾರೆ ಎಂದು ಮೂಲಗಳು ಹೇಳಿವೆ. ರಾಜ ಚಾರ್ಲ್ಸ್ ಶೀಘ್ರ ಗುಣಮುಖವಾಗಲಿ ಎಂದು ಜಾಗತಿಕ ಮುಖಂಡರು ಹಾರೈಸಿದ್ದಾರೆ.
2022ರ ಸೆಪ್ಟಂಬರ್ 8ರಂದು ಬ್ರಿಟನ್ ರಾಣಿ ಎಲಿಝಬೆತ್ ಮೃತಪಟ್ಟ ಬಳಿಕ ಚಾರ್ಲ್ಸ್ ಬ್ರಿಟನ್ ರಾಜರಾಗಿ ನೇಮಕಗೊಂಡಿದ್ದಾರೆ.