×
Ad

ಸೊಳ್ಳೆಯ ಗಾತ್ರದ ಡ್ರೋನ್ ತಯಾರಿಸಿದ ಚೀನಾ: ಬೇಹುಗಾರಿಕೆ, ಹ್ಯಾಕಿಂಗ್ ಭೀತಿ!

Update: 2025-06-26 21:25 IST

PC : X \ @sumitsaurabh

ಬೀಜಿಂಗ್: ಚೀನಾವು ಅತೀ ಸಣ್ಣ ಡ್ರೋನ್ ಅನ್ನು ತಯಾರಿಸಿದ್ದು ಇದು ನೋಡಲು ಸೊಳ್ಳೆಯ ಹಾಗಿದೆ. ಸದ್ದಿಲ್ಲದೆ ಮತ್ತು ರಹಸ್ಯವಾಗಿ ಹಾರಾಟ ನಡೆಸುವ ಇದನ್ನು ಬೇಹುಗಾರಿಕೆ ಹಾಗೂ ಹ್ಯಾಕಿಂಗ್‍ ನಂತಹ ಕೃತ್ಯಗಳಿಗೆ ಬಳಸಬಹುದು ಎಂಬ ಆತಂಕ ಹೆಚ್ಚಿದೆ.

ಎಲೆಗಳನ್ನು ಹೋಲುವ ಎರಡು ಹಳದಿ ರೆಕ್ಕೆಗಳು, ತೆಳುವಾದ ಕಪ್ಪು ದೇಹ ಮತ್ತು ತೆಳುವಾದ ತಂತಿಯ ಮೂರು ಕಾಲುಗಳನ್ನು ಹೊಂದಿದೆ ಎಂದು `ದಿ ಸನ್' ವರದಿ ಮಾಡಿದೆ. ಸೊಳ್ಳೆಯನ್ನು ಹೋಲುವ ಡ್ರೋನ್ ಅನ್ನು ವಿಜ್ಞಾನಿಗಳು ಹಿಡಿದಿರುವ ವೀಡಿಯೊವನ್ನು ಸರ್ಕಾರಿ ಸ್ವಾಮ್ಯದ ಮಾಧ್ಯಮ ಪ್ರಸಾರ ಮಾಡಿದ್ದು ಇದು ಮಿಲಿಟರಿ ಮತ್ತು ನಾಗರಿಕ ಚಟುವಟಿಕೆಗಳನ್ನು ನಿರ್ವಹಿಸುತ್ತದೆ ಎಂದು ಹೇಳಿದೆ. ಪಾಸ್‍ ವರ್ಡ್‍ ಗಳಂತಹ ಸೂಕ್ಷ್ಮ ಮಾಹಿತಿಯನ್ನು ಕದಿಯಲು ಈ ಸಾಧನವನ್ನು ಬಳಸಬಹುದು. ಈ ಡ್ರೋನ್‍ ಗಳು ಮಾರಣಾಂತಿಕ ವೈರಸ್‍ ಗಳನ್ನು ಹೊಂದಿರಬಹುದು. ಕದ್ದಾಲಿಕೆ, ಹ್ಯಾಕಿಂಗ್, ಖಾಸಗಿ ಕಣ್ಗಾವಲು ಇತ್ಯಾದಿ ಕೃತ್ಯಗಳಿಗೆ ಕ್ರಿಮಿನಲ್‍ ಗಳು ಬಳಸುವ ಸಾಧ್ಯತೆಯಿದೆ ಎಂದು ರಕ್ಷಣಾ ಸಂಶೋಧಕರು ಎಚ್ಚರಿಕೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News