×
Ad

ನ್ಯಾಷನಲ್ ಟೈಮ್ ಸೆಂಟರ್ ಮೇಲೆ ಅಮೆರಿಕದಿಂದ ಸೈಬರ್ ದಾಳಿ : ಚೀನಾ ಆರೋಪ

Update: 2025-10-20 20:27 IST

ಸಾಂದರ್ಭಿಕ ಚಿತ್ರ | Photo Credit : freepik.com

ಬೀಜಿಂಗ್, ಅ.20: ಚೀನಾ ಅಕಾಡೆಮಿ ಆಫ್ ಸೈನ್ಸ್‍ನ ಅಂಗಸಂಸ್ಥೆ ನ್ಯಾಷನಲ್ ಟೈಮ್ ಸೆಂಟರ್ ಮೇಲೆ ಅಮೆರಿಕ ಸೈಬರ್ ದಾಳಿ ನಡೆಸಿ ಸೂಕ್ಷ್ಮ ರಹಸ್ಯ ಮಾಹಿತಿಗಳನ್ನು ಕಳವು ಮಾಡಿದೆ ಎಂದು ಚೀನಾ ಆರೋಪಿಸಿದೆ.

ಅಮೆರಿಕದ ರಾಷ್ಟ್ರೀಯ ಭದ್ರತಾ ಏಜೆನ್ಸಿ ಸೈಬರ್ ದಾಳಿ ನಡೆಸಿ 2022ರಿಂದಲೂ ಕೇಂದ್ರದ ಸಿಬ್ಬಂದಿಗಳ ಮೊಬೈಲ್ ಫೋನ್‍ಗಳು ಹಾಗೂ ನೆಟ್‍ವರ್ಕ್ ವ್ಯವಸ್ಥೆಗಳ ಮೂಲಕ ರಹಸ್ಯ ಮಾಹಿತಿಗಳನ್ನು ಕದಿಯುತ್ತಿರುವುದಕ್ಕೆ ವಿಶ್ವಾಸಾರ್ಹ ಪುರಾವೆ ಲಭಿಸಿದೆ ಎಂದು ಚೀನಾದ ರಾಷ್ಟ್ರೀಯ ಭದ್ರತಾ ಇಲಾಖೆ ಹೇಳಿಕೆ ನೀಡಿದೆ.

ಗಂಭೀರ ಉಲ್ಲಂಘನೆಗಳು ಸಂವಹನ ಜಾಲಗಳು, ಹಣಕಾಸು ವ್ಯವಸ್ಥೆಗಳು, ವಿದ್ಯುತ್ ಸರಬರಾಜು ಮತ್ತು ಅಂತಾರಾಷ್ಟ್ರೀಯ ಪ್ರಮಾಣಿತ ಸಮಯ(ಇಂಟರ್‌ನ್ಯಾಷನಲ್ ಸ್ಟ್ಯಾಂಡರ್ಡ್ ಟೈಮ್')ದ ವ್ಯವಸ್ಥೆಯನ್ನು ಅಡ್ಡಿಪಡಿಸಬಹುದು ಎಂದು ಎಚ್ಚರಿಕೆ ನೀಡಿದೆ. ರಾಷ್ಟ್ರೀಯ ಪ್ರಮಾಣಿತ ಸಮಯ(ನ್ಯಾಷನಲ್ ಸ್ಟ್ಯಾಂಡರ್ಡ್ ಟೈಮ್')ವನ್ನು ನಿರ್ವಹಿಸುವ ಮತ್ತು ಸಂವಹನ, ಹಣಕಾಸು ಮತ್ತು ರಕ್ಷಣೆ ಸೇರಿದಂತೆ ದೇಶದಾದ್ಯಂತ ಪ್ರಮುಖ ಕ್ಷೇತ್ರಗಳಿಗೆ ಒದಗಿಸುವ ಕಾರ್ಯವನ್ನು ನ್ಯಾಷನಲ್ ಟೈಮ್ ಸೆಂಟರ್ ನಿರ್ವಹಿಸುತ್ತದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News