×
Ad

ಚೀನಾ | ದೋಣಿ ಮುಳುಗಿ 8 ಮಂದಿ ಮೃತ್ಯು

Update: 2024-12-04 22:01 IST

ಸಾಂದರ್ಭಿಕ ಚಿತ್ರ | PC : PTI

ಬೀಜಿಂಗ್ : ನೈಋತ್ಯ ಚೀನಾದ ಗ್ವಿಝೌ ಪ್ರಾಂತದಲ್ಲಿ ದೋಣಿ ಮುಳುಗಿ 8 ಮಂದಿ ಸಾವನ್ನಪ್ಪಿದ್ದು 5 ಮಂದಿಯನ್ನು ರಕ್ಷಿಸಲಾಗಿದೆ ಎಂದು ಚೀನಾದ ಅಧಿಕಾರಿಗಳು ಬುಧವಾರ ಹೇಳಿದ್ದಾರೆ.

ಸ್ಥಳೀಯ ನಗರಸಭೆಯ ಮಾಲಕತ್ವದ ಈ ದೋಣಿ ಅಕ್ರಮವಾಗಿ ಪ್ರಯಾಣಿಕರನ್ನು ಕರೆದೊಯ್ಯುವ ಕಾರ್ಯಕ್ಕೆ ಬಳಕೆಯಾಗುತ್ತಿತ್ತು. ಮಿತಿ ಮೀರಿದ ಪ್ರಯಾಣಿಕರು ತುಂಬಿದ್ದರಿಂದ ದೋಣಿ ನೀರಿನಲ್ಲಿ ಮುಳುಗಿದೆ.

ಪಿಂಗ್‍ಝೆಂಗ್ ನದಿಯ ಮತ್ತೊಂದು ದಡದಿಂದ ಗಿಡಮೂಲಿಕೆ ಸಂಗ್ರಹಿಸಲು ಸ್ಥಳೀಯ ಗ್ರಾಮಸ್ಥರು ದೋಣಿಯಲ್ಲಿ ಸಾಗುತ್ತಿದ್ದಾಗ ದುರಂತ ಸಂಭವಿಸಿದೆ. ಪಿಂಗ್‍ಝೆಂಗ್ ನದಿಯಲ್ಲಿ ದೋಣಿಯ ಮೂಲಕ ಪ್ರಯಾಣಿಕರನ್ನು ಕರೆದೊಯ್ಯಲು ಅವಕಾಶವಿಲ್ಲ ಎಂದು ಚೀನಾದ `ಕಿಯಾಕ್ಸಿನ್' ಸುದ್ದಿಸಂಸ್ಥೆ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News