ಸುಂಕಾಸ್ತ್ರದ ಬೆದರಿಕೆಗೆ ಬಗ್ಗುವುದಿಲ್ಲ: ಚೀನಾ
Update: 2025-10-12 22:39 IST
PC: x.com/MMinevich
ಬೀಜಿಂಗ್, ಅ.12: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ 100% ಸುಂಕದ ಬೆದರಿಕೆಗೆ ಬಗ್ಗುವುದಿಲ್ಲ ಎಂದು ಚೀನಾ ರವಿವಾರ ಹೇಳಿದ್ದು ಬೆದರಿಕೆಯ ಬದಲು ಮಾತುಕತೆಯ ಮೂಲಕ ಭಿನ್ನಾಭಿಪ್ರಾಯಗಳನ್ನು ಪರಿಹರಿಸಿಕೊಳ್ಳಬೇಕು ಎಂದು ಆಗ್ರಹಿಸಿದೆ.
ಚೀನಾದ ನಿಲುವು ಸ್ಥಿರವಾಗಿದೆ. ನಾವು ಸುಂಕ ಯುದ್ಧವನ್ನು ಬಯಸುವುದಿಲ್ಲ, ಆದರೆ ಯುದ್ಧಕ್ಕೆ ಹೆದರುವುದೂ ಇಲ್ಲ. ಅಧಿಕ ಸುಂಕದ ಬೆದರಿಕೆ ಒಡ್ಡುವುದು ಚೀನಾದೊಂದಿಗೆ ವ್ಯವಹರಿಸುವ ಸರಿಯಾದ ಮಾರ್ಗವಲ್ಲ. ಅಮೆರಿಕವು ತನ್ನ ಅಭ್ಯಾಸವನ್ನು ಪಟ್ಟುಹಿಡಿದು ಮುಂದುವರಿಸಿದರೆ ಚೀನಾ ತನ್ನ ನ್ಯಾಯಸಮ್ಮತ ಹಕ್ಕುಗಳು ಮತ್ತು ಹಿತಾಸಕ್ತಿಗಳನ್ನು ಕಾಪಾಡಲು ಅನುಗುಣವಾದ ಕ್ರಮಗಳನ್ನು ದೃಢನಿಶ್ಚಯದಿಂದ ಕೈಗೊಳ್ಳುತ್ತದೆ ಎಂದು ಚೀನಾದ ವಾಣಿಜ್ಯ ಇಲಾಖೆ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದೆ.