×
Ad

ಚೀನಾ, ಆಸಿಯಾನ್ ನಡುವಿನ ಮುಕ್ತ ವ್ಯಾಪಾರ ಒಪ್ಪಂದ ವಿಸ್ತರಣೆ

Update: 2025-10-28 20:39 IST

Hasnoor Hussain/ Reuters

ಕೌಲಾಲಂಪುರ (ಮಲೇಶ್ಯ), ಅ. 28: ಚೀನಾ ಮತ್ತು ಆಗ್ನೇಯ ಏಶ್ಯ ದೇಶಗಳ ಸಂಘಟನೆ (ಆಸಿಯಾನ್) ತಮ್ಮ ನಡುವಿನ ಮುಕ್ತ ವ್ಯಾಪಾರ ಒಪ್ಪಂದವನ್ನು ಮೇಲ್ದರ್ಜೆಗೆ ಏರಿಸಿಕೊಂಡಿವೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಾರಿರುವ ವ್ಯಾಪಾರ ಸಮರದ ಹಿನ್ನೆಲೆಯಲ್ಲಿ ಈ ಎರಡು ವಲಯಗಳ ನಡುವಿನ ವ್ಯಾಪಾರದಲ್ಲಿ ನಿರಂತರ ಏರಿಕೆಯಾಗುತ್ತಿದೆ.

ಕೌಲಾಂಪುರದಲ್ಲಿ ನಡೆಯುತ್ತಿರುವ 47ನೇ ಆಸಿಯಾನ್ ಶೃಂಗಸಭೆಯ ನೇಪಥ್ಯದಲ್ಲಿ ಮಂಗಳವಾರ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಒಪ್ಪಂದಕ್ಕೆ ಸಹಿ ಹಾಕುವ ಸಂದರ್ಭದಲ್ಲಿ ಚೀನಾ ಪ್ರಧಾನಿ ಲಿ ಕಿಯಾಂಗ್ ಮತ್ತು ಮಲೇಶ್ಯ ಪ್ರಧಾನಿ ಅನ್ವರ್ ಇಬ್ರಾಹೀಮ್ ಉಪಸ್ಥಿತರಿದ್ದರು.

ಒಪ್ಪಂದದ ‘‘3.0 ಆವೃತ್ತಿ’’ಯು ಮೂಲಸೌಕರ್ಯ, ಡಿಜಿಟಲ್ ಮತ್ತು ಪರಿಸರಸ್ನೇಹಿ ಯೋಜನೆಗಳ ಸಹಭಾಗಿತ್ವ ಹಾಗೂ ವ್ಯಾಪಾರ ಮತ್ತು ಜನರ ನಡುವಿನ ಪರಸ್ಪರ ವಿನಿಮಯಗಳ ವ್ಯಾಪ್ತಿಯನ್ನು ಹಿಗ್ಗಿಸುತ್ತದೆ ಎಂದು ಚೀನಾದ ಸ್ಟೇಟ್ ಕೌನ್ಸಿಲ್ ಹೇಳಿದೆ. ಇದು 2010ರಲ್ಲಿ ಜಾರಿಗೆ ಬಂದ ಚೀನಾದೊಂದಿಗಿನ ಆಸಿಯಾನ್‌ನ ಮೊದಲ ಮುಕ್ತ ವ್ಯಾಪಾರ ಒಪ್ಪಂದದ ವ್ಯಾಪ್ತಿಯನ್ನು ವಿಸ್ತರಿಸುತ್ತದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News