ಅಮೆರಿಕದ ಮೇಲೆ ವಿಶೇಷ ಬಂದರು ಶುಲ್ಕ ವಿಧಿಸಿದ ಚೀನಾ
ಸಾಂದರ್ಭಿಕ ಚಿತ್ರ | PC : freepik.com
ಬೀಜಿಂಗ್: ಚೀನಾದ ಬಂದರುಗಳಿಗೆ ಆಗಮಿಸುವ ಅಮೆರಿಕದ ಹಡಗುಗಳ ಮೇಲಿನ ವಿಶೇಷ ಬಂದರು ಶುಲ್ಕ ಅಕ್ಟೋಬರ್ 14ರಿಂದ ಜಾರಿಗೆ ಬಂದಿರುವುದಾಗಿ ಚೀನಾ ಮಂಗಳವಾರ ಘೋಷಿಸಿದೆ.
ಅಂತರಾಷ್ಟ್ರೀಯ ನೌಕಾ ಸಾರಿಗೆಯಲ್ಲಿ ನ್ಯಾಯಸಮ್ಮತ ಸ್ಪರ್ಧೆಯನ್ನು ಖಾತರಿಪಡಿಸಲು ಮತ್ತು ಚೀನಾದ ಶಿಪ್ಪಿಂಗ್ ಉದ್ಯಮ ಹಾಗೂ ಉದ್ಯಮಗಳ ಕಾನೂನುಬದ್ಧ ಹಕ್ಕುಗಳು ಮತ್ತು ಹಿತಾಸಕ್ತಿಗಳನ್ನು ರಕ್ಷಿಸುವ ಗುರಿಯೊಂದಿಗೆ ವಿಶೇಷ ಶುಲ್ಕವನ್ನು ವಿಧಿಸಲಾಗುತ್ತಿದೆ ಎಂದು ಸರ್ಕಾರಿ ಸ್ವಾಮ್ಯದ `ಗ್ಲೋಬಲ್ ಟೈಮ್ಸ್' ವರದಿ ಮಾಡಿದೆ.
ಅಮೆರಿಕದ ಸಂಸ್ಥೆಗಳು ಅಥವಾ ವ್ಯಕ್ತಿಗಳು 25% ಅಥವಾ ಅದಕ್ಕಿಂತ ಹೆಚ್ಚಿನ ನೇರ ಅಥವಾ ಪರೋಕ್ಷ ಪಾಲುದಾರಿಕೆ ಹೊಂದಿರುವ ಘಟಕಗಳ ಮಾಲಕತ್ವದ ಹಡಗುಗಳು, ಅಮೆರಿಕಾದ ಧ್ವಜ ಹೊಂದಿರುವ, ಅಮೆರಿಕಾ ನಿರ್ಮಿತ ಹಡಗುಗಳಿಗೆ ಈ ಶುಲ್ಕ ಅನ್ವಯಿಸುತ್ತದೆ. ಅಕ್ಟೋಬರ್ 14ರಿಂದ ಮುಂದಿನ ವರ್ಷದ ಎಪ್ರಿಲ್ 17ರವರೆಗೆ ಪ್ರತೀ ಟನ್‍ಗೆ ಸುಮಾರು 56 ಡಾಲರ್ ಶುಲ್ಕ ವಿಧಿಸಲಾಗುತ್ತಿದ್ದು ಪ್ರತೀ ವರ್ಷ ಹೆಚ್ಚಿಸಲಾಗುತ್ತದೆ ಎಂದು ಚೀನಾದ ವಾಣಿಜ್ಯ ಇಲಾಖೆ ಹೇಳಿದೆ.