×
Ad

ತೈವಾನ್ ಸುತ್ತ ಮಿಲಿಟರಿ ಚಟುವಟಿಕೆ ಹೆಚ್ಚಿಸಿದ ಚೀನಾ

Update: 2024-11-03 21:18 IST

PC : PTI 

ತೈಪೆ : ಚೀನಾವು ದೀರ್ಘ-ದೂರ ತರಬೇತಿ ವಿಮಾನಗಳ ತರಬೇತಿ ಹಾರಾಟವನ್ನು ಮುಂದುವರಿಸಿರುವ ಜತೆಗೆ ತೈವಾನ್ ಸುತ್ತ ಮಿಲಿಟರಿ ಚಟುವಟಿಕೆಯನ್ನು ಹೆಚ್ಚಿಸಿದೆ. ತೈವಾನ್ ದ್ವೀಪದ ಬಳಿ ಚೀನಾದ ಸುಮಾರು 37 ಯುದ್ಧವಿಮಾನಗಳು, ಡ್ರೋನ್‍ಗಳು ಹಾಗೂ ಇತರ ವಿಮಾನಗಳು ಕಂಡುಬಂದಿವೆ ಎಂದು ಮೂಲಗಳನ್ನು ಉಲ್ಲೇಖಿಸಿ ತೈವಾನ್‍ನ ಮಾಧ್ಯಮಗಳು ರವಿವಾರ ವರದಿ ಮಾಡಿವೆ.

ತೈವಾನ್ ತನ್ನ ಭೂಪ್ರದೇಶಕ್ಕೆ ಸೇರಿದೆ ಎಂದು ಪ್ರತಿಪಾದಿಸುತ್ತಿರುವ ಚೀನಾ ಇತ್ತೀಚಿನ ದಿನಗಳಲ್ಲಿ ತೈವಾನ್ ಸುತ್ತಮುತ್ತ ಮಿಲಿಟರಿ ಚಟುವಟಿಕೆಯನ್ನು ಹೆಚ್ಚಿಸುವ ಮೂಲಕ ತೈವಾನ್ ಆಡಳಿತದ ಮೇಲೆ ಒತ್ತಡ ಹೇರುತ್ತಿದೆ.

`ರವಿವಾರ ಬೆಳಿಗ್ಗೆ ಸ್ಥಳೀಯ ಕಾಲಮಾನ 9 ಗಂಟೆಯ ವೇಳೆಗೆ ಚೀನಾದ ಯುದ್ಧವಿಮಾನಗಳನ್ನು ಪತ್ತೆಹಚ್ಚಲಾಗಿದ್ದು ಇದರಲ್ಲಿ 35 ವಿಮಾನಗಳು ತೈವಾನ್ ಜಲಸಂಧಿಯ ಮಧ್ಯದ ರೇಖೆಯನ್ನು ದಾಟಿ, ತೈವಾನ್ ವಾಯುಪ್ರದೇಶದ ಮೂಲಕ ಪಶ್ಚಿಮ ಪೆಸಿಫಿಕ್ ಸಾಗರದತ್ತ ಸಾಗಿವೆ. ತಕ್ಷಣ ಯುದ್ಧವಿಮಾನಗಳು, ಕ್ಷಿಪಣಿ ವ್ಯವಸ್ಥೆ ಹಾಗೂ ಯುದ್ಧನೌಕೆಗಳಲ್ಲಿ ಈ ಪ್ರದೇಶದಲ್ಲಿ ನಿಯೋಜಿಸಿ ಭದ್ರತೆ ಬಿಗಿಗೊಳಿಸಲಾಗಿದೆ ಎಂದು ತೈವಾನ್‍ನ ರಕ್ಷಣಾ ಇಲಾಖೆ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News