×
Ad

ಚೀನಾ | ವಿಶ್ವದ ಅತೀ ಎತ್ತರದ ಸೇತುವೆ ಉದ್ಘಾಟನೆ

ಎರಡು ಗಂಟೆಗಳ ಪ್ರಯಾಣವನ್ನು ಎರಡು ನಿಮಿಷಕ್ಕಿಳಿಸಿದ ಸೇತುವೆ!

Update: 2025-09-29 21:13 IST

Credit : X \ @VoiceofPD

ಬೀಜಿಂಗ್, ಸೆ.29: ಚೀನಾದ ಬೈಪಾನ್ ನದಿಯ ಮೇಲೆ ನಿರ್ಮಿಸಲಾದ ವಿಶ್ವದ ಅತೀ ಎತ್ತರದ ಸೇತುವೆ ಹುವಜಿಯಾಂಗ್ ಗ್ರ್ಯಾಂಡ್ ಕ್ಯಾನ್ಯೋನ್ ಸೇತುವೆ ಇದೀಗ ಸಂಚಾರಕ್ಕೆ ಮುಕ್ತವಾಗಿದೆ.

ಬೈಪಾನ್ ನದಿಯ ಮೇಲೆ 625 ಮೀಟರ್ ಎತ್ತರದಲ್ಲಿ ನಿರ್ಮಾಣಗೊಂಡಿರುವ ಸೇತುವೆಯು ಕಣಿವೆಯ ಒಂದು ಬದಿಯಿಂದ ಮತ್ತೊಂದು ಬದಿಗೆ ಎರಡು ಗಂಟೆಗಳ ಪ್ರಯಾಣವನ್ನು ಕೇವಲ 2 ನಿಮಿಷಕ್ಕೆ ಇಳಿಸಿದೆ.

ಸುಮಾರು ಮೂರೂವರೆ ವರ್ಷಗಳಲ್ಲಿ ನಿರ್ಮಾಣಗೊಂಡಿರುವ ಸೇತುವೆಯು 2,890 ಮೀಟರ್ ಉದ್ದವಿದ್ದು ಇದರ ಮುಖ್ಯ ಕಮಾನು 1,420 ಮೀಟರ್ ಎತ್ತರವಿದೆ ಇದು ಸೆಪ್ಟೆಂಬರ್ 28ರಿಂದ ಸಂಚಾರಕ್ಕೆ ಮುಕ್ತವಾಗಿದೆ ಎಂದು ಕ್ಸಿನ್‍ ಹುವಾ ಸುದ್ದಿಸಂಸ್ಥೆ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News