×
Ad

ದಿಲ್ಲಿಯಲ್ಲಿ ನಡೆಯುವ ಜಿ20 ಶೃಂಗಸಭೆಯಲ್ಲಿ ಚೀನಾ ಅಧ್ಯಕ್ಷ ಭಾಗವಹಿಸುವುದು ಸಂಶಯ

ಸೆಪ್ಟೆಂಬ್‌ 9 ಹಾಗೂ 10ರಂದು ರಾಜಧಾನಿ ದಿಲ್ಲಿಯಲ್ಲಿ ನಡೆಯಲಿರುವ ಜಿ20 ನಾಯಕರ ಶೃಂಗಸಭೆಯಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್‌ ಭಾಗವಹಿಸುವುದಿಲ್ಲ

Update: 2023-08-31 13:58 IST

PHOTO:PTI

ಹೊಸದಿಲ್ಲಿ : ಸೆಪ್ಟೆಂಬ್‌ 9 ಹಾಗೂ 10ರಂದು ರಾಜಧಾನಿ ದಿಲ್ಲಿಯಲ್ಲಿ ನಡೆಯಲಿರುವ ಜಿ20 ನಾಯಕರ ಶೃಂಗಸಭೆಯಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್‌ ಭಾಗವಹಿಸುವುದಿಲ್ಲ ಎಂದು ಮೂಲಗಳು ತಿಳಿಸಿವೆ.

ಈ ಶೃಂಗಸಭೆಯಲ್ಲಿ ಪ್ರೀಮಿಯರ್‌ ಲಿಕ ಖ್ಯಿಯಾಂಗ್ ಅವರು ಚೀನಾವನ್ನು ಪ್ರತಿನಿಧಿಸಲಿದ್ದಾರೆ ಎಂದು ಇಬ್ಬರು ಅಧಿಕಾರಿಗಳಿಂದ ಮಾಹಿತಿ ದೊರಕಿದೆ.

ಕ್ಸಿ ಜಿನ್ಪಿಂಗ್‌ ಈ ಜಿ20 ಸಭೆಯಲ್ಲಿ ಭಾಗವಹಿಸುತ್ತಾರೆಯೇ ಅಥವಾ ಇಲ್ಲವೇ ಎಂಬ ಕುರಿತು ಭಾರತದ ಮತ್ತು ಚೀನಾದ ವಿದೇಶಾಂಗ ಸಚಿವಾಲಯಗಳು ಇಲ್ಲಿಯ ತನಕ ಏನೂ ಹೇಳಿಲ್ಲ.

ಕ್ಸಿ ಜಿನ್ಪಿಂಗ್‌ ಈ ಕಾರ್ಯಕ್ರಮದಲ್ಲಿ ಭಾಗವಹಿಸದೇ ಇರಲು ಏಕೆ ನಿರ್ಧರಿಸಿದ್ದಾರೆಂದು ತಿಳಿದಿಲ್ಲ ಎಂದು ಮೂಲಗಳು ತಿಳಿಸಿವೆ.

ಶೃಂಗಸಭೆಯಲ್ಲಿ ಅಮೆರಿಕಾ ಅಧ್ಯಕ್ಷ ಜೋ ಬೈಡೆನ್‌ ಅವರೂ ಭಾಗವಹಿಸುತ್ತಿರುವುದರಿಂದ ಈ ಸಂದರ್ಭ ಬೈಡೆನ್‌ ಮತ್ತು ಕ್ಸಿ ಭೇಟಿ ನಡೆಯಬಹುದೆಂದು ಅಂದಾಜಿಸಲಾಗಿತ್ತು.

ಕ್ಸಿ ಮತ್ತು ಬೈಡೆನ್‌ ಈ ಹಿಂದೆ ಕಳೆದ ನವೆಂಬರ್‌ನಲ್ಲಿ ಇಂಡೊನೇಷ್ಯಾದ ಬಾಲಿಯಲ್ಲಿ ನಡೆದ ಜಿ20 ಸಭೆಯಲ್ಲಿ ಭೇಟಿಯಾಗಿದ್ದರು.

ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಈಗಾಗಲೇ ತಾವು ಬರುತ್ತಿಲ್ಲ ಎಂದು ತಿಳಿಸಿದ್ದು ಅವರ ಬದಲು ರಷ್ಯಾದ ವಿದೇಶ ಸಚಿವ ಸರ್ಗೇಯಿ ಲಾವ್ರೋವ್‌ ಭಾಗವಹಿಸಲಿದ್ದಾರೆ.

ಮೂರನೇ ಅವಧಿಗೆ ಚೀನಾ ಅಧಿಕ್ಷರಾಗಿರುವ ಕ್ಸಿಜಿನ್ಪಿಂಗ್‌ ಅವರು ಚೀನಾ ಈ ವರ್ಷ ಸಾಂಕ್ರಾಮಿಕ ಸಂಬಂಧ ಗಡಿ ನಿಯಂತ್ರಣಗಳನ್ನು ಕೈಬಿಟ್ಟ ನಂತರ ತೀರಾ ಕಡಿಮೆ ವಿದೇಶ ಪ್ರವಾಸ ಕೈಗೊಂಡಿದ್ದಾರೆ.

ಅತ್ತ ಕ್ಸಿ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಜೊಹಾನ್ನೆಸ್‌ಬರ್ಗ್‌ನಲ್ಲಿ ನಡೆದ ಬ್ರಿಕ್ಸ್‌ ಶೃಂಗಸಭೆಯಲ್ಲಿ ಭೇಟಿಯಾಗಿದ್ದರಲ್ಲದೆ ಎರಡೂ ದೇಶಗಳ ನಡುವೆ ಉದ್ವಿಗ್ನತೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಚರ್ಚಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News