×
Ad

ಕೊರೊನಾ ವೈರಸ್ ಬಳಿಕ ಬಾವಲಿ ಕೊರೊನಾ ವೈರಸ್ ಸರದಿ?

Update: 2025-02-22 20:24 IST

ಸಾಂದರ್ಭಿಕ ಚಿತ್ರ | PC : PTI

ಬೀಜಿಂಗ್: ವಿಶ್ವಾದ್ಯಂತ ಸ್ಫೋಟಗೊಂಡು ಲಕ್ಷಾಂತರ ಜನರ ಸಾವಿಗೆ ಕಾರಣವಾಗಿದ್ದ ಕೋವಿಡ್-19 ಸಾಂಕ್ರಾಮಿಕಕ್ಕೆ ಕಾರಣವಾಗಿದ್ದ ಕೊರೊನಾ ವೈರಸ್ ನಂತೆಯೆ ಹೊಸ ಬಾವಲಿ ಕೊರೊನಾ ವೈರಸ್ ಕೂಡಾ ಪ್ರಾಣಿಯಿಂದ ಮನುಷ್ಯನಿಗೆ ಸೋಂಕು ತಗುಲಿಸುವ ಅಪಾಯ ಹೊಂದಿದೆ ಎಂದು ಚೀನಾ ವೈರಾಣು ತಜ್ಞರು ಪತ್ತೆ ಹಚ್ಚಿದ್ದಾರೆ.

ಕೋವಿಡ್-19 ಸಾಂಕ್ರಾಮಿಕಕ್ಕೆ ಕಾರಣವಾಗಿದ್ದ ವೈರಸ್ ನಂತೆಯೆ ಈ ವೈರಸ್ ಕೂಡಾ ಸೋಂಕನ್ನು ಹರಡಲು ಮನುಷ್ಯನ ಅದೇ ಕೋಶಗಳನ್ನು ಬಳಸುವುದು ಇದಕ್ಕೆ ಕಾರಣ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಈ ಅಧ್ಯಯನವನ್ನು ಕೋವಿಡ್-19 ಹರಡಲು ಕಾರಣವಾಗಿತ್ತು ಎಂಬ ಆರೋಪಕ್ಕೆ ಗುರಿಯಾಗಿರುವ ವುಹಾನ್ ವೈರಾಣು ಸಂಸ್ಥೆಯ ಚೀನಾ ವೈರಾಣು ತಜ್ಞೆ ಶಿ ಝೆಂಗ್ಲಿ ನೇತೃತ್ವದಲ್ಲಿ ನಡೆಸಲಾಗಿದೆ.

ಆದರೆ, ಬಾವಲಿಗಳಲ್ಲಿನ ವೈರಸ್ ಗಳ ಕುರಿತ ಸಂಶೋಧನೆಗಾಗಿ ಬಾವಲಿ ಮಹಿಳೆ ಎಂದೇ ಖ್ಯಾತರಾಗಿರುವ ಶಿ ಹಾಗೂ ಚೀನಾ ಸರಕಾರ ವುಹಾನ್ ಪ್ರಯೋಗಾಲಯದಿಂದ ವೈರಾಣು ಸೋರಿಕೆಯಾಗಿದೆ ಎಂಬ ಆರೋಪಗಳನ್ನು ಅಲ್ಲಗಳೆದಿದ್ದವು.

ಇದು ಹಾಂಗ್ ಕಾಂಗ್ ನ ಜಪಾನೀಸ್ ಪಿಪಿಸ್ಟ್ರೆಲ್ ಬಾವಲಿಯಲ್ಲಿ ಮೊತ್ತಮೊದಲ ಬಾರಿಗೆ ಪತ್ತೆ ಹಚ್ಚಲಾಗಿದ್ದ ಎಚ್ಕೆಯು5 ಕೊರೊನಾ ವೈರಸ್ ನ ಹೊಸ ವಂಶಾವಳಿಯ ಆವಿಷ್ಕಾರವಾಗಿದೆ. ಈ ಹೊಸ ವೈರಸ್ ಮೆರ್ಬೆಕೊವೈರಸ್ ಸಬ್ ಜೆನಸ್ ನಿಂದ ಬರಲಿದ್ದು, ಮಧ್ಯಪ್ರಾಚ್ಯ ಉಸಿರಾಟ ಸಮಸ್ಯೆಗೆ ಕಾರಣವಾಗುವ ವೈರಸ್ ಅನ್ನೂ ಒಳಗೊಂಡಿದೆ ಎಂದು ಹಾಂಗ್ ಕಾಂಗ್ ಮೂಲದ ‘South China Morning Post’ ವರದಿ ಮಾಡಿದೆ.

ಕೋವಿಡ್-19 ಸೋಂಕು ಹರಡಲು ಸಾರ್ಸ್ ಕೋವ್-2 ವೈರಸ್ ಬಳಸಿಕೊಂಡಿದ್ದ ಮನುಷ್ಯನ ಅದೇ ಆ್ಯಂ ಜಿಯೊಟೆನ್ಸಿನ್ ಪರಿವರ್ತಿಸುವ ಕಿಣ್ವ(ಎಸಿಇ2)ಕ್ಕೆ ಅಂಟಿಕೊಳ್ಳುವ ಸಾಮರ್ಥ್ಯವನ್ನು ಈ ವೈರಸ್ ಹೊಂದಿದೆ ಎಂದು ಹೇಳಲಾಗಿದೆ.

“ಬಾವಲಿಗಳ ಆ್ಯಂಜಿಯೊಟೆನ್ಸಿನ್ ಪರಿವರ್ತಿಸುವ ಕಿಣ್ವವಲ್ಲದೆ ಮನುಷ್ಯನ ಹಾಗೂ ಹಲವು ಸಸ್ತನಿಗಳ ಆ್ಯಂಜಿಯಟೆನ್ಸಿನ್ ಪರಿವರ್ತಿಸುವ ಕಿಣ್ವಗಳನ್ನು ಹಾಗೂ ವಿವಿಧ ಸಸ್ತನಿಗಳ ಮೂಳೆಗಳ ಆ್ಯಂ ಜಿಯೊಟೆನ್ಸಿನ್ ಪರಿವರ್ತಿಸುವ ಕಿಣ್ವಗಳನ್ನು ಬಳಸಿಕೊಳ್ಳುವ ಎಚ್ಕೆಯು5-ಕೋವ್ ನ ಪ್ರತ್ಯೇಕ ಹಾಗೂ ವಿಶಿಷ್ಟ ವಂಶಾವಳಿಯನ್ನು ಪತ್ತೆ ಹಚ್ಚಲಾಗಿದೆ” ಎಂದು ಶಿ ನೇತೃತ್ವದ ವೈರಾಣು ತಜ್ಞರ ತಂಡ ರಚಿಸಿರುವ ಪ್ರಬಂಧ ‘Cell’ ವಾರ್ತಾಪತ್ರದಲ್ಲಿ ಪ್ರಕಟವಾಗಿದೆ ಎಂದು ‘South China Morning Post’ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News