×
Ad

ವಸಾಹತುಶಾಹಿ ಯುಗ ಅಂತ್ಯಗೊಂಡಿದೆ; ಭಾರತ, ಚೀನಾದೊಂದಿಗೆ ಹಾಗೆ ಮಾತನಾಡುವಂತಿಲ್ಲ: ಅಮೆರಿಕಗೆ ಪುಟಿನ್ ಎಚ್ಚರಿಕೆ

Update: 2025-09-04 18:41 IST

ವ್ಲಾದಿಮಿರ್ ಪುಟಿನ್ | PTI

ಬೀಜಿಂಗ್: ಬಲಿಷ್ಠ ಶಸ್ತ್ರಾಸ್ತ್ರ ರಾಷ್ಟ್ರಗಳಾದ ಭಾರತ ಮತ್ತು ಚೀನಾ ಮೇಲೆ ಸುಂಕ ಹಾಗೂ ಆರ್ಥಿಕ ದಿಗ್ಬಂಧನಗಳನ್ನು ಹೇರುವ ಪ್ರಯತ್ನ ಮಾಡಬಾರದು ಎಂದು ಅಮೆರಿಕಗೆ ತಾಕೀತು ಮಾಡಿದ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್, “ನೀವು ಆ ರೀತಿಯಲ್ಲಿ ಭಾರತ ಅಥವಾ ಚೀನಾದೊಂದಿಗೆ ಮಾತನಾಡುವಂತಿಲ್ಲ” ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ.

ಶಾಂಘೈ ಕೋ-ಆಪರೇಷನ್ ಆರ್ಗನೈಸೇಷನ್ ಶೃಂಗ ಸಭೆ ಮುಕ್ತಾಯಗೊಂಡ ನಂತರ ಮಾಧ್ಯಮವನ್ನುದ್ದೇಶಿಸಿ ಮಾತನಾಡಿದ ವ್ಲಾದಿಮಿರ್ ಪುಟಿನ್, ಏಶ್ಯದ ಎರಡು ದೊಡ್ಡ ಶಕ್ತಿಗಳಾದ ಭಾರತ ಮತ್ತು ಚೀನಾವನ್ನು ಮಣಿಸಲು ಡೊನಾಲ್ಡ್ ಟ್ರಂಪ್ ಸರಕಾರ ಆರ್ಥಿಕ ಒತ್ತಡವನ್ನು ಸಾಧನವನ್ನಾಗಿ ಬಳಸುತ್ತಿದೆ ಎಂದು ಆರೋಪಿಸಿದರು.

“150 ಕೋಟಿ ಜನಸಂಖ್ಯೆ ಹೊಂದಿರುವ ಭಾರತ ಹಾಗೂ ಬಲಿಷ್ಠ ಆರ್ಥಿಕತೆಯನ್ನು ಹೊಂದಿರುವ ಚೀನಾ ದೇಶಗಳಿವೆ. ಆದರೆ, ಅವು ತಮ್ಮದೇ ಆದ ಸ್ವದೇಶಿ ರಾಜಕೀಯ ಯಾಂತ್ರಿಕತೆ ಹಾಗೂ ಕಾನೂನುಗಳನ್ನು ಹೊಂದಿವೆ” ಎಂದು ಅವರು ಬೊಟ್ಟು ಮಾಡಿದರು.

“ಅವರು ಭಾರತ ಮತ್ತು ಚೀನಾವನ್ನು ಶಿಕ್ಷಿಸಲಿದ್ದಾರೆ ಎಂದು ಯಾರಾದರೂ ನಿಮಗೆ ಹೇಳಿದರೆ, ಎರಡು ದೊಡ್ಡ ದೇಶಗಳ ನಾಯಕತ್ವ ಅದಕ್ಕೆ ಹೇಗೆ ಪ್ರತಿಕ್ರಿಯಿಸಬಹುದು ಎಂದು ನೀವು ಯೋಚಿಸಬೇಕು” ಎಂದೂ ಅವರು ಎಚ್ಚರಿಸಿದ್ದಾರೆ.

ಭಾರತ ಮತ್ತು ಚೀನಾವನ್ನು ಪಾಲುದಾರರು ಎಂದು ಬಣ್ಣಿಸಿದ ವ್ಲಾದಿಮಿರ್ ಪುಟಿನ್, “ಅಮೆರಿಕದ ಸುಂಕ ಆಡಳಿತವು ಈ ದೇಶಗಳ ನಾಯಕತ್ವವನ್ನು ದುರ್ಬಲಗೊಳಿಸುವ ಪ್ರಯತ್ನವಾಗಿದೆ” ಎಂದು ಆರೋಪಿಸಿದರು.

ಉಲ್ಬಣಗೊಳ್ಳುತ್ತಿರುವ ವ್ಯಾಪಾರ ಮತ್ತು ಭೌಗೋಳಿಕ ರಾಜಕೀಯ ಪ್ರಕ್ಷುಬ್ಧತೆಯ ಹಿನ್ನೆಲೆಯಲ್ಲಿ ಪುಟಿನ್ ಅವರಿಂದ ಈ ಹೇಳಿಕೆ ಹೊರ ಬಿದ್ದಿದೆ. ಆಗಸ್ಟ್ 27ರಂದು ಭಾರತದ ಮೇಲಿನ ಸುಂಕವನ್ನು ದ್ವಿಗುಣಗೊಳಿಸಿದ್ದ ಅಮೆರಿಕ, ಸುಂಕದ ಪ್ರಮಾಣವನ್ನು ಶೇ. 50ಕ್ಕೆ ಏರಿಕೆ ಮಾಡಿತ್ತು. ಉಕ್ರೇನ್ ಮೇಲೆ ಆಕ್ರಮಣ ಮಾಡಿರುವ ರಶ್ಯದಿಂದ ತೈಲ ಆಮದು ಮಾಡಿಕೊಳ್ಳುತ್ತಿರುವ ಭಾರತವನ್ನು ಶಿಕ್ಷಿಸುವ ಗುರಿಯನ್ನು ಈ ಹೆಚ್ಚುವರಿ ಸುಂಕ ಹೇರಿಕೆ ಹೊಂದಿತ್ತು. ಇದರೊಂದಿಗೆ, ವ್ಯಾಪಾರ ಕೊರತೆಯನ್ನು ತಗ್ಗಿಸುವ ಡೊನಾಲ್ಡ್ ಟ್ರಂಪ್ ರ ‘ಅಮೆರಿಕ ಮೊದಲು’ ದೃಷ್ಟಿಕೋನವನ್ನು ಮುನ್ನೆಲೆಗೆ ತರುವ ಗುರಿಯನ್ನೂ ಹೊಂದಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News