×
Ad

ಸೈಪ್ರಸ್: ಇಸ್ರೇಲ್ ರಾಯಭಾರಿ ಕಚೇರಿ ಸಮೀಪ ಸ್ಫೋಟ

Update: 2023-10-22 00:01 IST

ಸಾಂದರ್ಭಿಕ ಚಿತ್ರ

ನಿಕೋಸಿಯಾ: ಸೈಪ್ರಸ್ ರಾಜಧಾನಿ ನಿಕೋಸಿಯಾದಲ್ಲಿರುವ ಶನಿವಾರ ಮುಂಜಾನೆ ಪೈಪ್ ಬಾಂಬ್ ಸ್ಫೋಟಿಸಿರುವುದಾಗಿ ಮಾಧ್ಯಮ ವರದಿಗಳು ತಿಳಿಸಿವೆ. ಆದರೆ ಘಟನೆಯಲ್ಲಿ ಯಾರಿಗೂ ಯಾವುದೇ ಸಾವುನೋವು ಸಂಭವಿಸಿಲ್ಲ. ಕಟ್ಟಡಕ್ಕೆ ಸಣ್ಣಪುಟ್ಟ ಹಾನಿ ಆಗಿದೆ ಎಂದು ವರದಿಗಳು ತಿಳಿಸಿವೆ. ಘಟನೆಗೆ ಸಂಬಂಧಿಸಿ ನಾಲ್ವರನ್ನು ಬಂಧಿಸಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.

ಸ್ಫೋಟ ನಡೆದ ಸ್ಥಳಕ್ಕೆ ತಕ್ಷಣವೇ ಸೈಪ್ರಸ್‌ನ ಸ್ಫೋಟಕವಸ್ತುಗಳ ತಜ್ಞರು ಆಗಮಿಸಿದ್ದು, ಪೈಪ್ ಬಾಂಬ್‌ನಿಂದಾಗಿ ಸ್ಫೋಟ ನಡೆದಿರುವುದನ್ನು ದೃಢಪಡಿಸಿದ್ದಾರೆ. ಸುಡುಮದ್ದುಗಳ ಉತ್ಪಾದನೆಯಲ್ಲಿ ಬಳಸಲಾಗುವ ಸ್ಫೋಟಕ ರಾಸಾಯನಿಕಗನ್ನು ಪೈಪ್‌ಬಾಂಬ್ ಒಳಗೊಂಡಿತ್ತು ಎಂದು ತಿಳಿದುಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News