×
Ad

ಅಫ್ಘಾನಿಸ್ತಾನ ಭೂಕಂಪ: ಮೃತರ ಸಂಖ್ಯೆ 900ಕ್ಕೆ ಏರಿಕೆ

Update: 2025-09-02 12:51 IST

Photo credit: PTI

ಜಲಾಲಾಬಾದ್: ಪೂರ್ವ ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ 900ಕ್ಕೆ ಏರಿಕೆಯಾಗಿದ್ದು, 3,000 ಮಂದಿ ಗಾಯಗೊಂಡಿದ್ದಾರೆ ಎಂದು ಮಂಗಳವಾರ ಅಧಿಕಾರಿಗಳು ತಿಳಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ.

ರವಿವಾರ ರಾತ್ರಿ ಗುಡ್ಡಗಾಡು ಪ್ರಾಂತ್ಯದಲ್ಲಿ 6,0 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿತ್ತು. ಈ ಭೂಕಂಪದ ತೀವ್ರತೆಗೆ ಗ್ರಾಮಗಳು ನೆಲಸಮಗೊಂಡು, ಹಲವಾರು ಗಂಟೆಗಳ ಕಾಲ ಜನರು ಅವಶೇಷಗಳಡಿ ಸಿಲುಕಿದ್ದರು.

“ಗಾಯಾಳುಗಳನ್ನು ತೆರವುಗೊಳಿಸಲಾಗಿದ್ದು, ಮೃತರ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ” ಎಂದು ಅಫ್ಘಾನಿಸ್ತಾನ ರಾಷ್ಟ್ರೀಯ ವಿಪತ್ತು ನಿರ್ವಹಣೆ ಪ್ರಾಧಿಕಾರದ ವಕ್ತಾರರು ತಿಳಿಸಿದ್ದಾರೆ ಎಂದು Associated Press ಸುದ್ದಿ ಸಂಸ್ಥೆ ವರದಿ ಮಾಡಿದೆ.

“ಭೂಕಂಪನದಿಂದ ಕೆಲವು ಪ್ರದೇಶಗಳಲ್ಲಿ ಭೂಕುಸಿತ ಸಂಭವಿಸಿದ್ದು, ಇದರಿಂದ ರಸ್ತೆಗಳು ಮುಚ್ಚಿ ಹೋಗಿವೆ. ಆದರೆ, ಅವುಗಳನ್ನು ಮತ್ತೆ ತೆರವುಗೊಳಿಸಲಾಗಿದ್ದು, ತಲುಪಲು ಕಠಿಣವಾಗಿರುವ ಪ್ರದೇಶಗಳಿಗೆ ಪ್ರವೇಶ ಒದಗಿಸಲು ಉಳಿದ ರಸ್ತೆಗಳನ್ನೂ ತೆರವುಗೊಳಿಸಲಾಗುವುದು” ಎಂದು ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News