×
Ad

ಬ್ರಿಕ್ಸ್‌ಗೆ ಅಧಿಕ ಸುಂಕ : ಡೊನಾಲ್ಡ್ ಟ್ರಂಪ್ ಪುನರುಚ್ಚಾರ

Update: 2025-10-15 21:58 IST

 ಡೊನಾಲ್ಡ್ ಟ್ರಂಪ್ | Photo Credit : PTI 

ವಾಶಿಂಗ್ಟನ್,ಅ.15: ಬ್ರಿಕ್ಸ್ ಸದಸ್ಯ ರಾಷ್ಟ್ರಗಳ ವಿರುದ್ಧ ತನ್ನ ಸುಂಕ ನೀತಿಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸಮರ್ಥಿಸಿಕೊಂಡಿದ್ದಾರೆ. ಬ್ರಿಕ್ಸ್ ಸಮೂಹವು ‘ಡಾಲರ್ ವಿರುದ್ಧದ ದಾಳಿ’ಯಾಗಿದೆ ಎಂದವರು ಬಣ್ಣಿಸಿದ್ದಾರೆ. ಶ್ವೇತಭವನದಲ್ಲಿ ಅರ್ಜೆಂಟಿನಾ ಪ್ರಧಾನಿ ಜೇವಿಯರ್ ಮಿಲೆಯಿ ಜೊತೆ ಮಾತುಕತೆ ನಡೆಸಿದ ಅವರು ಅಮೆರಿಕದ ಕರೆನ್ಸಿಯನ್ನು ಸ್ಥಾನಪಲ್ಲಟಗೊಳಿಸಲು ಪ್ರಯತ್ನಿಸಿದಲ್ಲಿ ಹೆಚ್ಚು ಸುಂಕ ವಿಧಿಸುವುದಾಗಿ ತಾನು ಎಚ್ಚರಿಕೆ ನೀಡಿದ ಬಳಿಕ ಕೆಲವು ಸದಸ್ಯ ರಾಷ್ಟ್ರಗಳು ಬ್ರಿಕ್ಸ್ ಒಕ್ಕೂಟದಿಂದ ಹಿಂದೆ ಸರಿದಿವೆೆ ಎಂದವರು ಹೇಳಿದ್ದಾರೆ.

‘‘ಬ್ರಿಕ್ಸ್ ಒಕ್ಕೂಟಕ್ಕೆ ಸೇರ ಬಯಸುವವರಿಗೆ ನಾನು ಹೇಳುವುದೇನೆಂದರೆ, ನೀವು ಆ ಕೂಟಕ್ಕೆ ಸೇರುವುದೇನೋ ಸರಿ. ಆದರೆ ನಿಮ್ಮ ದೇಶ ಮೇಲೆ ನಾನು ಹೆಚ್ಚು ಸುಂಕ ವಿಧಿಸುತ್ತೇನೆ. ಈಗ ಪ್ರತಿಯೊಬ್ಬರೂ ಬ್ರಿಕ್ಸ್‌ನಿಂದ ಹೊರಬರತೊಡಗಿದ್ದಾರೆ’’ ಎಂದು ಟ್ರಂಪ್ ಹೇಳಿದ್ದಾರೆ.

ಬ್ರೆಝಿಲ್, ರಶ್ಯ, ಭಾರತ, ಚೀನಾ ಹಾಗೂ ದಕ್ಷಿಣ ಆಫ್ರಿಕಾ ರಾಷ್ಟ್ರಗಳನ್ನು ಒಳಗೊಂಡ ಬ್ರಿಕ್ಸ್ ಸಮೂಹವು ಇತ್ತೀಚೆಗೆ ನೂತನ ಸದಸ್ಯರನ್ನು ಸೇರ್ಪಡೆಗೊಳಿಸಲು ನಿರ್ಧರಿಸಿತ್ತು. ಈಜಿಪ್ಟ್, ಇಥಿಯೋಪಿಯಾ, ಇಂಡೊನೇಶ್ಯ, ಇರಾನ್ ಹಾಗೂ ಯುಎಇ ದೇಶಗಳನ್ನು ಸೇರ್ಪಡೆಗೊಳಿಸಲು ಅದು ಒಕ್ಕೂಟವನ್ನು ವಿಸ್ತರಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News