ಹಮಾಸ್ ಒಪ್ಪಂದ ಉಲ್ಲಂಘಿದರೆ ಇಸ್ರೇಲ್ ಯುದ್ಧ ಆರಂಭಿಸಬಹುದು: ಟ್ರಂಪ್
Update: 2025-10-16 20:53 IST
ಡೊನಾಲ್ಡ್ ಟ್ರಂಪ್ |Photo Credit : PTI
ವಾಷಿಂಗ್ಟನ್, ಅ.16: ಇತ್ತೀಚೆಗೆ ಸಹಿ ಹಾಕಲಾದ ಕದನ ವಿರಾಮ ಒಪ್ಪಂದವನ್ನು ಗೌರವಿಸಲು ಹಮಾಸ್ ವಿಫಲವಾದರೆ ಗಾಝಾದಲ್ಲಿ ಮಿಲಿಟರಿ ಕಾರ್ಯಾಚರಣೆಯನ್ನು ಪುನರಾರಂಭಿಸಲು ತಾನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹುಗೆ ಹಸಿರು ನಿಶಾನೆ ತೋರಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
`ನಾನು ಹೇಳಿದ ತಕ್ಷಣ ಇಸ್ರೇಲ್ ಪಡೆಗಳನ್ನು ಗಾಝಾದ ರಸ್ತೆಗಳಲ್ಲಿ ನಿಯೋಜಿಸಬಹುದು. ಹಮಾಸ್ ಗೆ ಏನಾಗಲಿದೆ ಎಂಬುದು ಅತೀ ಶೀಘ್ರದಲ್ಲೇ ತಿಳಿಯಲಿದೆ' ಎಂದು ಟ್ರಂಪ್ ಹೇಳಿರುವುದಾಗಿ ಸಿಎನ್‍ಎನ್ ವರದಿ ಮಾಡಿದೆ.
ಹಮಾಸ್ ಹಸ್ತಾಂತರಿಸಿದ ಒಂದು ಮೃತದೇಹ ಇಸ್ರೇಲ್ ಒತ್ತೆಯಾಳುವಿನದ್ದಲ್ಲ ಎಂದು ಬುಧವಾರ ಇಸ್ರೇಲ್ ರಕ್ಷಣಾ ಪಡೆ(ಐಡಿಎಫ್) ಹೇಳಿತ್ತು. ಪ್ರಸ್ತುತ, ಇಸ್ರೇಲ್‍ನ ತಜ್ಞರ ಬೆಂಬಲದೊಂದಿಗೆ ಈಜಿಪ್ಟ್‍ನ ತಂಡವು ಗಾಝಾದಲ್ಲಿದ್ದು ಉಳಿದ 21 ಒತ್ತೆಯಾಳುಗಳ ಮೃತದೇಹವನ್ನು ಪತ್ತೆಹಚ್ಚುವ ವಿಧಾನಗಳನ್ನು ಅನ್ವೇಷಿಸುತ್ತಿದೆ.