"ನಮ್ಮ ಕಾಲದ ಹಿಟ್ಲರ್": ವಾಷಿಂಗ್ಟನ್ ರೆಸ್ಟೋರೆಂಟ್‌ನಲ್ಲಿ ಪ್ರತಿಭಟನೆ ಎದುರಿಸಿದ ಟ್ರಂಪ್
ಫೆಲೆಸ್ತೀನ್ ಪರ ಘೋಷಣೆ ಕೂಗಿದ ಪ್ರತಿಭಟನಾಕಾರರು
Screengrab:X/@townhallcom
ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಾಷಿಂಗ್ಟನ್ ಡಿಸಿಯ ರೆಸ್ಟೋರೆಂಟ್‌ನಲ್ಲಿ ಪ್ರತಿಭಟನೆಯನ್ನು ಎದುರಿಸಿದರು.
ಟ್ರಂಪ್ ಶ್ವೇತಭವನದ ಬಳಿಯ ಜೋಸ್ ಸೀಫುಡ್, ಪ್ರೈಮ್ ಸ್ಟೀಕ್ & ಸ್ಟೋನ್ ಕ್ರ್ಯಾಬ್‌ಗೆ ಪ್ರವೇಶಿಸಿದಾಗ, ಪ್ರತಿಭಟನಾಕಾರರ ಒಂದು ಸಣ್ಣ ಗುಂಪು "ಫ್ರೀ ಡಿಸಿ" ಮತ್ತು "ಫ್ರೀ ಫೆಲೆಸ್ತೀನ್" ಎಂದು ಘೋಷಣೆ ಕೂಗಿದರು. ಇದಲ್ಲದೆ ಟ್ರಂಪ್ ಅವರನ್ನು "ನಮ್ಮ ಕಾಲದ ಹಿಟ್ಲರ್" ಎಂದು ಕರೆದರು.
"ನಮ್ಮ ನಗರ ಸುರಕ್ಷಿತವಾಗಿದೆ. ಆನಂದಿಸಿ, ಮನೆಗೆ ಹೋಗುವಾಗ ನಿಮ್ಮನ್ನು ಯಾರೂ ದೋಚುವುದಿಲ್ಲ" ಎಂದು ಟ್ರಂಪ್ ರೆಸ್ಟೋರೆಂಟ್‌ನಲ್ಲಿದ್ದವರಿಗೆ ಈ ವೇಳೆ ಹೇಳಿದರು.
ಸಿಎನ್ಎನ್ ಪ್ರಕಾರ, ಪ್ರತಿಭಟನಾಕಾರರನ್ನು ನಂತರ ಹೊರಗೆ ಕರೆದೊಯ್ಯಲಾಗಿದೆ. ಟ್ರಂಪ್ ಅವರೊಂದಿಗೆ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ, ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಮತ್ತು ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಇದ್ದರು.
Trump stares down “Free Palestine” nuts inside of a DC restaurant.
— Townhall.com (@townhallcom) September 10, 2025
Legendary. pic.twitter.com/F0bTo5NmO6