×
Ad

ಬೈಡನ್ ನೇಮಿಸಿದ 4 ಅಧಿಕಾರಿಗಳ ವಜಾ ಮಾಡಿದ ಡೊನಾಲ್ಡ್ ಟ್ರಂಪ್

Update: 2025-01-21 21:26 IST

ಡೊನಾಲ್ಡ್ ಟ್ರಂಪ್ | PC : PTI 

ವಾಷಿಂಗ್ಟನ್ : ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಮೊದಲ ದಿನವೇ ಡೊನಾಲ್ಡ್ ಟ್ರಂಪ್ ಸರಣಿ ಕಾರ್ಯನಿರ್ವಾಹಕ ಆದೇಶಗಳಿಗೆ ಸಹಿ ಹಾಕಿದ್ದಾರೆ.

ಅದರಲ್ಲಿ ಕೆಲವು ಪ್ರಮುಖ ಆದೇಶಗಳು:

►  ನಿರ್ಗಮಿತ ಅಧ್ಯಕ್ಷ ಜೋ ಬೈಡನ್ ನೇಮಿಸಿದ್ದ 4 ಹಿರಿಯ ಅಧಿಕಾರಿಗಳ ವಜಾ.

► 2021ರ ಜನವರಿ 6ರಂದು ಅಮೆರಿಕದ ಕ್ಯಾಪಿಟಲ್ ಹಿಲ್ಸ್ ಮೇಲೆ ನಡೆದ ದಾಳಿಯಲ್ಲಿ ಪಾಲ್ಗೊಂಡಿದ್ದಕ್ಕೆ ಕ್ರಿಮಿನಲ್ ಆರೋಪ ಹೊತ್ತಿರುವ ಎಲ್ಲರಿಗೂ ಕ್ಷಮಾದಾನ.

► ವಲಸೆ, ಪೌರತ್ವ ಪ್ರಕ್ರಿಯೆಯನ್ನು ಮರುರೂಪಿಸುವ ವಿವಿಧ ಆದೇಶಗಳಿಗೆ ಸಹಿ. ಅಮೆರಿಕ-ಮೆಕ್ಸಿಕೋ ಗಡಿಭಾಗದ ಬಳಿ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಣೆ.

► ಪ್ಯಾರಿಸ್ ಹವಾಮಾನ ಒಪ್ಪಂದದಿಂದ ಅಮೆರಿಕ ಹೊರಕ್ಕೆ.

► ಟಿಕ್‍ಟಾಕ್ ನಿಷೇಧಿಸುವ ಕಾಯ್ದೆಗೆ ತಡೆ.

► ಮೆಕ್ಸಿಕೋ ಕೊಲ್ಲಿಗೆ ಅಮೆರಿಕ ಕೊಲ್ಲಿ ಎಂದು ಮರುನಾಮಕರಣ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News