×
Ad

ಮಾದಕ ವಸ್ತುಗಳ ಕಳ್ಳ ಸಾಗಣೆ : ಬ್ರಿಟನ್ ನಲ್ಲಿ ಭಾರತೀಯ ಮೂಲದ ಇಬ್ಬರಿಗೆ ಜೈಲುಶಿಕ್ಷೆ

Update: 2023-12-19 23:48 IST

ಸಾಂದರ್ಭಿಕ ಚಿತ್ರ

ಲಂಡನ್: ಆಫ್ರಿಕಾ ಮತ್ತು ದಕ್ಷಿಣ ಅಮೆರಿಕದಿಂದ ಕೃಷ್ಯುತ್ಪನ್ನಗಳ ಅಡಿಯಲ್ಲಿ ಮಾದಕ ವಸ್ತುಗಳನ್ನು ಅಡಗಿಸಿಟ್ಟು ಕಳ್ಳಸಾಗಣೆ ಮಾಡಿದ ಆರೋಪದಲ್ಲಿ ಇಬ್ಬರು ಭಾರತೀಯ ಮೂಲದ ವ್ಯಕ್ತಿಗಳಿಗೆ ಲಂಡನಿನ ವಿಚಾರಣಾ ನ್ಯಾಯಾಲಯ ಒಟ್ಟು 34 ವರ್ಷದ ಜೈಲುಶಿಕ್ಷೆ ವಿಧಿಸಿದೆ.

ಲಂಡನ್ನಲ್ಲಿ ಸರಕು ಸಾಗಣೆ ಸಂಸ್ಥೆಯನ್ನು ನಡೆಸುತ್ತಿರುವ ಆನಂದ್ ತ್ರಿಪಾಠಿ ಮತ್ತು ವರುಣ್ ಭಾರದ್ವಾಜ್ ತಮ್ಮ ಸಂಸ್ಥೆಯನ್ನು ಬಳಸಿಕೊಂಡು ಮಾದಕ ವಸ್ತುಗಳ ಕಳ್ಳಸಾಗಣೆ ನಡೆಸುತ್ತಿದ್ದರು. ಆಫ್ರಿಕಾ ಮತ್ತು ದಕ್ಷಿಣ ಅಮೆರಿಕದಿಂದ ಕೃಷಿ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವ ಜತೆಗೆ, ಚೆನ್ನೈಯಿಂದ ಬಿಸ್ಕಿಟ್, ಮುಂಬೈಯಿಂದ ತಿಂಡಿಗಳು, ಶ್ರೀಲಂಕಾದಿಂದ ತೆಂಗಿನ ನಾರನ್ನು ಆಮದು ಮಾಡಿಕೊಳ್ಳುವ ಸಂದರ್ಭ ಅದರಡಿ ಸಿಗರೇಟುಗಳನ್ನು ಕದ್ದುಮುಚ್ಚಿ ತರುವ ಮೂಲಕ ತೆರಿಗೆ ವಂಚನೆ ಮಾಡಿದ್ದಾರೆ ಎಂದು ಪ್ರಕರಣ ದಾಖಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News