ಉಕ್ರೇನ್ ನಲ್ಲಿ ಈಸ್ಟರ್ ಕದನ ವಿರಾಮ: ಪುಟಿನ್ ಘೋಷಣೆ
Update: 2025-04-19 21:30 IST
ವ್ಲಾದಿಮಿರ್ ಪುಟಿನ್ | PC : PTI
ಮಾಸ್ಕೋ: ಈಸ್ಟರ್ ಹಿನ್ನೆಲೆಯಲ್ಲಿ ಉಕ್ರೇನ್ ಸಂಘರ್ಷಕ್ಕೆ 30 ಗಂಟೆಗಳ ಕದನ ವಿರಾಮವನ್ನು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಶನಿವಾರ ಘೋಷಿಸಿರುವುದಾಗಿ ಸರ್ಕಾರಿ ಸ್ವಾಮ್ಯದ ಆರ್ಟಿ ಮಾಧ್ಯಮ ಸಂಸ್ಥೆ ವರದಿ ಮಾಡಿದೆ.
ಶನಿವಾರ(ಎಪ್ರಿಲ್ 19) ಸಂಜೆ 6 ಗಂಟೆಯಿಂದ (ರಶ್ಯ ಕಾಲಮಾನ) ರವಿವಾರ ಮಧ್ಯರಾತ್ರಿಯವರೆಗೆ ಉಕ್ರೇನ್ ನಲ್ಲಿ ಕದನ ವಿರಾಮ ಜಾರಿಯಲ್ಲಿರುತ್ತದೆ ಎಂದು ಪುಟಿನ್ ಘೋಷಿಸಿದ್ದು ಉಕ್ರೇನ್ ಕೂಡಾ ಈ ಸದಾಶಯದ ನಡೆಯನ್ನು ಅನುಸರಿಸಬೇಕು ಎಂದು ಆಗ್ರಹಿಸಿದ್ದಾರೆ.
ಇದೇ ಸಂದರ್ಭ, ಶತ್ರುಗಳಿಂದ ಸಂಭಾವ್ಯ ಕದನ ವಿರಾಮ ಉಲ್ಲಂಘನೆ ಮತ್ತು ಪ್ರಚೋದನೆಯ ಕೃತ್ಯವನ್ನು ಎದುರಿಸಲು ನಮ್ಮ ಪಡೆಗಳು ಸನ್ನದ್ಧವಾಗಿರಬೇಕು ಎಂದವರು ಸೂಚಿಸಿರುವುದಾಗಿ ವರದಿಯಾಗಿದೆ.