×
Ad

ಇಸ್ರೇಲ್- ಇರಾನ್ ಸಂಘರ್ಷ | ತಕ್ಷಣದ ಕದನ ವಿರಾಮಕ್ಕೆ ಒತ್ತಾಯಿಸಿದ ಈಜಿಪ್ಟ್

Update: 2025-06-17 23:53 IST

Photo credit: PTI

ಕೈರೋ : ಇಸ್ರೇಲ್ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಶಮನ ಮಾಡಲು ಒತ್ತಾಯಿಸುತ್ತಿರುವ ದೇಶಗಳಲ್ಲಿ ಈಜಿಪ್ಟ್ ಕೂಡ ಒಂದಾಗಿದೆ. ಈ ಸಂಘರ್ಷವು ಪ್ರಾದೇಶಿಕ ಸಂಘರ್ಷವನ್ನುಂಟುಮಾಡಬಹುದು ಎಂದು ಈಜಿಪ್ಟ್ ಎಚ್ಚರಿಸಿದೆ.

ಈಜಿಪ್ಟ್ ವಿದೇಶಾಂಗ ಸಚಿವ ಬದರ್ ಅಬ್ದೆಲಟ್ಟಿ ಅವರು ಇರಾನ್ ಸಚಿವ ಅಬ್ಬಾಸ್ ಮತ್ತು ಯುಎಸ್‌ ರಾಯಭಾರಿ ಸ್ಟೀವ್ ವಿಟ್ಕಾಫ್ ಅವರೊಂದಿಗೆ ಫೋನ್ ಕರೆ ಮಾಡಿ ಮಾತುಕತೆಯನ್ನು ನಡೆಸಿದ್ದು, ತಕ್ಷಣದ ಕದನ ವಿರಾಮಕ್ಕೆ ಕರೆ ನೀಡಿದ್ದಾರೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.

ಸಂಭಾಷಣೆಯ ಸಮಯದಲ್ಲಿ ಅಬ್ದೆಲಟ್ಟಿ ಇರಾನ್‌ನ ಪರಮಾಣು ಯೋಜನೆ ಕುರಿತು ಮಾತುಕತೆಗೆ ಒತ್ತಾಯಿಸಿದರು. ಇದು ಒಪ್ಪಂದಕ್ಕೆ ಏಕೈಕ ಮಾರ್ಗ. ಪ್ರದೇಶದ ಬಿಕ್ಕಟ್ಟುಗಳಿಗೆ ಯಾವುದೇ ಮಿಲಿಟರಿ ಪರಿಹಾರಗಳಿಲ್ಲ. ಇದು ಆ ಪ್ರದೇಶವನ್ನು ವ್ಯಾಪಕ ಅವ್ಯವಸ್ಥೆಗೆ ತಳ್ಳುತ್ತದೆ ಮತ್ತು ಎರಡೂ ಕಡೆಯವರಿಗೂ ಹಾನಿಯುಂಟುಮಾಡುತ್ತದೆ ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News