×
Ad

ಚುನಾವಣಾ ಫಲಿತಾಂಶ ಅಂತರಾಷ್ಟ್ರೀಯ ಸಮುದಾಯಕ್ಕೆ ಸ್ಪಷ್ಟ ಸಂದೇಶ ನೀಡಿದೆ: ಮುಯಿಝ್ಝು

Update: 2024-04-23 22:06 IST

ಮುಹಮ್ಮದ್ ಮುಯಿಝ್ಝು (Photo: X/ @MMuizzu)

 

ಮಾಲೆ: ಮಾಲ್ದೀವ್ಸ್‍ನಲ್ಲಿ ನಡೆದ ಸಂಸದೀಯ ಚುನಾವಣೆಯ ಫಲಿತಾಂಶ ಜನತೆಯ ಅಂತರಾಳವನ್ನು ತೆರೆದಿಟ್ಟಿದೆ ಮತ್ತು ಸಾರ್ವಭೌಮತ್ವ ಮತ್ತು ಸ್ವಾತಂತ್ರ್ಯದ ವಿಷಯದಲ್ಲಿ ಮಾಲ್ದೀವ್ಸ್ ನ ನಿಲುವನ್ನು ಅಂತರಾಷ್ಟ್ರೀಯ ಸಮುದಾಯಕ್ಕೆ ಸ್ಪಷ್ಟಪಡಿಸಿದೆ ಎಂದು ಮಾಲ್ದೀವ್ಸ್ ಅಧ್ಯಕ್ಷ ಮುಹಮ್ಮದ್ ಮುಯಿಝ್ಝು ಹೇಳಿದ್ದಾರೆ.

ಮಾಲ್ದೀವ್ಸ್ ನಲ್ಲಿ ನಡೆದ ಸಂಸದೀಯ ಚುನಾವಣೆಯಲ್ಲಿ ಅವರ ಪಿಎನ್‍ಸಿ ಪಕ್ಷ 68 ಸ್ಥಾನ ಮತ್ತು ಮೈತ್ರಿಕೂಟ 3 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು 93 ಸ್ಥಾನಗಳ ಸಂಸತ್‍ನಲ್ಲಿ ಸ್ಪಷ್ಟ ಬಹುಮತ ಗಳಿಸಿದೆ.

ಸಂಸತ್ ಚುನಾವಣಾ ಫಲಿತಾಂಶವು ಮಾಲ್ದೀವ್ಸ್ ಜನತೆ ವಿದೇಶಿ ದಬ್ಬಾಳಿಕೆಯಿಲ್ಲದೆ ತಮ್ಮ ಭವಿಷ್ಯವನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಸ್ವಾಯತ್ತತೆ ಬಯಸುತ್ತಾರೆ ಎಂಬುದನ್ನು ಸಾಬೀತುಪಡಿಸಿದೆ ಎಂದು ಅಧ್ಯಕ್ಷ ಮುಯಿಝ್ಝು ಹೇಳಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News