×
Ad

ಹೊಸ ರಾಜಕೀಯ ಪಕ್ಷ ಘೋಷಿಸಿದ ಎಲಾನ್ ಮಸ್ಕ್

Update: 2025-07-06 09:04 IST

AP Photo/Matt Rourke, File)

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಾಜಿ ಬೆಂಬಲಿಗ ಉದ್ಯಮಿ ಎಲಾನ್ ಮಸ್ಕ್ ಹೊಸ ರಾಜಕೀಯ ಪಕ್ಷವನ್ನು ಘೋಷಿಸಿದ್ದಾರೆ. ಅಮೆರಿಕದ ಏಕಪಕ್ಷ ವ್ಯವಸ್ಥೆಗೆ ಸವಾಲಾಗಿ ಈ ಪಕ್ಷ ಘೋಷಿಸಲಾಗಿದೆ ಎಂದು ಮಸ್ಕ್ ಶನಿವಾರ ಪ್ರಕಟಿಸಿದ್ದಾರೆ.

ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಮತ್ತು 2024ರಲ್ಲಿ ಟ್ರಂಪ್ ಪ್ರಚಾರಕ್ಕೆ ಅತ್ಯಧಿಕ ದೇಣಿಗೆ ನೀಡಿದ್ದ ಮಸ್ಕ್, ಫೆಡರಲ್ ವೆಚ್ಚವನ್ನು ಕಡಿತಗೊಳಿಸುವ ಮತ್ತು ಸರ್ಕಾರಿ ಉದ್ಯೋಗಗಳನ್ನು ಕಡಿತಗೊಳಿಸುವ ಉದ್ದೇಶದ ಸರ್ಕಾರಿ ಕ್ಷಮತಾ ಇಲಾಖೆ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ್ದರು. ಬಳಿಕ ಟ್ರಂಪ್ ಜತೆಗಿನ ವಿರಸದಿಂದ ಬೇರ್ಪಟ್ಟಿದ್ದರು.

"ನಿಮ್ಮ ಸ್ವಾತಂತ್ರ್ಯವನ್ನು ಮರಳಿ ನಿಮಗೆ ನೀಡುವ ಉದ್ದೇಶದಿಂದ ಅಮೆರಿಕ ಪಾರ್ಟಿಯನ್ನು ಇಂದು ರಚಿಸಲಾಗಿದೆ" ಎಂದು ಎಕ್ಸ್ ಪೋಸ್ಟ್ನಲ್ಲಿ ಮಸ್ಕ್ ಪ್ರಕಟಿಸಿದ್ದಾರೆ. "ಒಂದರಿಂದ ಎರಡು ಅಂಶಗಳಿಗೆ ನಿಮಗೆ ಹೊಸ ರಾಜಕೀಯ ಪಕ್ಷ ಅಗತ್ಯವಿದೆ; ನೀವು ಅದನ್ನು ಪಡೆದುಕೊಳ್ಳಿ. ನಾವು ದೇಶದಲ್ಲಿ ಹೊಂದಿರುವ ವ್ಯರ್ಥ ಮತ್ತು ಲಂಚದಿಂದ ದೇಶವನ್ನು ದಿವಾಳಿ ಮಾಡುವ ಏಕ ಪಕ್ಷ ವ್ಯವಸ್ಥೆಗೆ ಬಂದರೆ, ಅದು ಪ್ರಜಾಪ್ರಭುತ್ವ ಎನಿಸುವುದಿಲ್ಲ"ಎಂದು ಸ್ಪಷ್ಟಪಡಿಸಿದ್ದಾರೆ.

ಇದಕ್ಕೂ ಮುನ್ನ ಜುಲೈ 4ರಂದು ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಮಸ್ಕ್ ಜಾಲತಾಣದಲ್ಲಿ ಅಭಿಪ್ರಾಯ ಸಂಗ್ರಹಿಸಿ, "ದ್ವಿಪಕ್ಷೀಯ ವ್ಯವಸ್ಥೆ (ಕೆಲವರು ಏಕಪಕ್ಷ ಎಂದೂ ಕರೆಯುತ್ತಾರೆ)ಯಿಂದ ನಿಮಗೆ ಸ್ವಾತಂತ್ರ್ಯ ಬೇಕೇ ಎಂದು ಕೇಳಲು ಸ್ವಾತಂತ್ರ್ಯ ದಿನ ಸರಿಯಾದ ಸಂದರ್ಭ! ನಾವು ಅಮೆರಿಕ ಪಾರ್ಟಿ ರಚಿಸಬಹುದೇ? ಎಂದು ಕೇಳಿದ್ದಕ್ಕೆ ಶೇಕಡ 65.4% ಮಂದಿ ಸಹಮತ ಸೂಚಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News