×
Ad

ಸಾಮಾಜಿಕ ಜಾಲತಾಣ ʼಎಕ್ಸ್ʼ ಅನ್ನು ತನ್ನದೇ ಸಂಸ್ಥೆ xAIಗೆ ಮಾರಾಟ ಮಾಡಿದ ಎಲಾನ್ ಮಸ್ಕ್!

Update: 2025-03-29 12:17 IST

Photo credit: PTI, X

ಹೊಸದಿಲ್ಲಿ: ಎಲಾನ್ ಮಸ್ಕ್ ಸಾಮಾಜಿಕ ಜಾಲತಾಣ ʼಎಕ್ಸ್ʼ ಅನ್ನು ತನ್ನದೇ AI ಕಂಪೆನಿ xAIಗೆ 33 ಬಿಲಿಯನ್ ಡಾಲರ್‌ಗೆ ಮಾರಾಟ ಮಾಡಿದ್ದಾರೆ ಎಂದು ವರದಿಯಾಗಿದೆ.

2023ರಲ್ಲಿ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಆಧಾರಿತ xAI ಸಂಸ್ಥೆಯನ್ನು ಎಲಾನ್ ಮಸ್ಕ್ ಪ್ರಾರಂಭಿಸಿದರು. ಇದೀಗ ಈ ಸಂಸ್ಥೆಗೆ ʼಎಕ್ಸ್ʼ ಸಂಸ್ಥೆಯನ್ನು ಮಾರಾಟ ಮಾಡಿದ್ದಾರೆ ಅಂದರೆ ಎಕ್ಸ್ ಮಾಲಕತ್ವವನ್ನು xAI ಸಂಸ್ಥೆಗೆ ವರ್ಗಾಯಿಸಿದ್ದಾರೆ.

ಟೆಸ್ಲಾ, ಸ್ಪೇಸ್ಎಕ್ಸ್ ಸಂಸ್ಥೆಯ ಸಿಇಒ ಮತ್ತು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿರುವ ಎಲಾನ್ ಮಸ್ಕ್, 2022ರಲ್ಲಿ 44 ಬಿಲಿಯನ್‌ಗೆ Twitter ಅನ್ನು ಖರೀದಿಸಿದರು. ಬಳಿಕ ಅದರ ಸಿಬ್ಬಂದಿಗಳನ್ನು ತೆಗೆದು ಹಾಕಿದರು, ನಿಯಮಾವಳಿಗಳನ್ನು ಬದಲಾಯಿಸಿದರು. ಎಕ್ಸ್ ಎಂದು ಮರು ನಾಮಕರಣ ಮಾಡಿದರು. ಇದೀಗ ಖರೀದಿಗಿಂತ 12 ಬಿಲಿಯನ್ ಡಾಲರ್ ಕಡಿಮೆ ಮೊತ್ತಕ್ಕೆ x ಅನ್ನು ಮಾರಾಟ ಮಾಡಿದ್ದಾರೆ ಎಂದು ಹೇಳಲಾಗಿದೆ.

ʼಎಕ್ಸ್ʼ ಸಾಮಾಜಿಕ ಜಾಲತಾಣ 600 ಮಿಲಿಯನ್‌ಗಿಂತ ಅಧಿಕ ಸಕ್ರಿಯ ಬಳಕೆದಾರರನ್ನು ಹೊಂದಿದೆ. xAI ಮತ್ತು X ವಿಲೀನವಾಗಿದೆ. ನಾವು ಅಧಿಕೃತವಾಗಿ ಡೇಟಾ, ಮಾದರಿಗಳು, ವಿತರಣೆ ಮತ್ತು ಪ್ರತಿಭೆಯನ್ನು ಸಂಯೋಜಿಸುವಲ್ಲಿ ಹೆಜ್ಜೆ ಇಡುತ್ತೇವೆ ಎಂದು ಎಲಾನ್ ಮಸ್ಕ್ ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News