×
Ad

ರಶ್ಯದ ಯುದ್ಧಕ್ಕೆ ಯುರೋಪ್ ಆರ್ಥಿಕ ಸಹಾಯ ನೀಡುತ್ತಿದೆ : ಅಮೆರಿಕ ಆರೋಪ

Update: 2025-09-25 22:24 IST

 ಅಮೆರಿಕದ ಹಣಕಾಸು ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ - Photo Credit: AP

ವಾಷಿಂಗ್ಟನ್, ಸೆ.25: ರಶ್ಯದ ತೈಲ ಆಮದು ಮಾಡಿಕೊಳ್ಳುತ್ತಿರುವ ಭಾರತದಿಂದ ಸಂಸ್ಕರಿಸಿದ ತೈಲವನ್ನು ಯುರೋಪ್ ಖರೀದಿಸುವ ಮೂಲಕ ಯುರೋಪ್ ಕೂಡ ರಶ್ಯದ ಯುದ್ಧಕ್ಕೆ ಆರ್ಥಿಕ ಸಹಾಯ ಒದಗಿಸುತ್ತಿದೆ ಎಂದು ಅಮೆರಿಕದ ಹಣಕಾಸು ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಆರೋಪಿಸಿದ್ದಾರೆ.

ರಶ್ಯದಿಂದ ತೈಲ ಖರೀದಿಸುವುದಕ್ಕಾಗಿ ಅಧ್ಯಕ್ಷ ಟ್ರಂಪ್ ಏಕಪಕ್ಷೀಯವಾಗಿ ಭಾರತದ ಮೇಲೆ 25% ಸುಂಕ ವಿಧಿಸಿದ್ದಾರೆ. ಭಾರತ ನಿಧಾನವಾಗಿ ರಶ್ಯದ ತೈಲ ಖರೀದಿಯನ್ನು ಕಡಿಮೆಗೊಳಿಸುವುದಾಗಿ ನಾನು ನಿರೀಕ್ಷಿಸುತ್ತಿದ್ದೇನೆ. ಆದರೆ ವಿಲಕ್ಷಣ ವಿಷಯವೆಂದರೆ, ರಶ್ಯದ ತೈಲ ಆಮದು ಮಾಡಿಕೊಳ್ಳುತ್ತಿರುವ ಭಾರತದಿಂದ ಸಂಸ್ಕರಿಸಿದ ತೈಲವನ್ನು ಯುರೋಪ್ ಖರೀದಿಸುತ್ತಿದೆ. ಮತ್ತು ತನ್ನ ವಿರುದ್ಧದ ರಶ್ಯದ ಯುದ್ಧಕ್ಕೆ ತಾನೇ ಆರ್ಥಿಕ ನೆರವು ನೀಡುತ್ತಿದೆ' ಎಂದು ಬೆಸೆಂಟ್ ಹೇಳಿರುವುದಾಗಿ ಫಾಕ್ಸ್ ನ್ಯೂಸ್ ವರದಿ ಮಾಡಿದೆ.

ರಶ್ಯವು ಯುರೋಪಿಯನ್ನರನ್ನು ಪರೀಕ್ಷಿಸುತ್ತಿದೆ ಮತ್ತು ಯುರೋಪಿಯನ್ ಸಂಕಲ್ಪವು ಗಟ್ಟಿಯಾಗಬೇಕಿದೆ. ಆರ್ಥಿಕ ನಿರ್ಬಂಧದ ವಿಷಯದಲ್ಲಿ ಅವರು ಸಂಪೂರ್ಣ ಪಾರದರ್ಶಕ ಮತ್ತು ಪ್ರಾಮಾಣಿಕರಾಗಿ ಇರಬೇಕು' ಎಂದವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News