ಖ್ಯಾತ ಜೆಕ್ ಸಾಹಿತಿ ಮಿಲನ್ ಕುಂದೇರಾ ನಿಧನ
Update: 2023-07-12 16:59 IST
ಮಿಲನ್ ಕುಂದೇರಾ (PC: Twitter/ @Ian_Willoughby)
ಹೊಸದಿಲ್ಲಿ: ಜೆಕ್ ಮೂಲದ ಸಾಹಿತಿ, “ದಿ ಅನ್‌ಬೇರೇಬಲ್ ಲೈಟ್‌ನೆಸ್ ಆಫ್ ಬೀಯಿಂಗ್” ಕಾದಂಬರಿಯ ಲೇಖಕ ಮಿಲನ್ ಕುಂದೇರಾ ನಿಧನರಾಗಿದ್ದಾರೆಂದು ಜೆಕ್ ಟೆಲಿವಿಷನ್ ವರದಿ ಮಾಡಿದೆ. ಅವರಿಗೆ 94 ವರ್ಷ ವಯಸ್ಸಾಗಿತ್ತು.
ತಮ್ಮ ಕಾದಂಬರಿಗಳು, ವಿಶಿಷ್ಟ ಬರವಣೆಗೆಯ ಶೈಲಿಯ ಮೂಲಕ ಜನಪ್ರಿಯರಾಗಿದ್ದ ಕುಂದೇರಾ ಅವರು ಜೆಕ್ ನಗರ ಬ್ರನೋ ಎಂಬಲ್ಲಿ ಜನಿಸಿದ್ದರು. 1968ರಲ್ಲಿ ಜೆಕೊಸ್ಲೊವಾಕಿಯಾದ ಮೇಲೆ ಸೋವಿಯತ್ ಅತಿಕ್ರಮಣವನ್ನು ಟೀಕಿಸಿದ್ದಕ್ಕೆ ಬಹಿಷ್ಕಾರಗೊಂಡ ನಂತರ ಅವರು 1975ರಲ್ಲಿ ಫ್ರಾನ್ಸ್‌ಗೆ ವಲಸೆ ಹೋಗಿದ್ದರು.