Photo Credit : PTI 

ಅಬು ಧಾಬಿ, ಅ. 2: ದುಬೈನಿಂದ ಟೆಲ್ ಅವಿವ್ ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದಲ್ಲಾದ ದಾಳಿಯನ್ನು UAE ‘ಭಯೋತ್ಪಾದಕ ಕೃತ್ಯ’ ಎಂದು ಹೇಳಿದ್ದು, ಅಧಿಕಾರಿಗಳು ಈ ಘಟನೆ ಮತ್ತು ಇದರ ಹಿಂದಿನ ಉದ್ದೇಶದ ಬಗ್ಗೆ ತನಿಖೆಯನ್ನು ಮುಂದುವರಿಸಿದ್ದಾರೆ.

ಗಗನದಲ್ಲಿ ಸಂಭವಿಸಿದ ಈ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಭಾರತೀಯ ಪೈಲಟ್ ಸ್ಮಿತ್ ಮಚ್ಚರ್ ಅವರ ಸಾಹಸಮಯ ನಿರ್ಧಾರಗಳನ್ನು UAE ಅಧ್ಯಕ್ಷರ ಸಲಹೆಗಾರ ಅನ್ವರ್ ಗರ್ಗಾಶ್ ಅವರು ಶ್ಲಾಘಿಸಿದ್ದು, ಅತ್ಯಂತ ಕಠಿಣ ಪರಿಸ್ಥಿತಿಯಲ್ಲೂ ವೃತ್ತಿಪರತೆ ಮತ್ತು ನೈತಿಕ ಬದ್ಧತೆಯನ್ನು ತೋರಿದ ಸ್ಮಿತ್ ಮಚ್ಚರ್ ‘ನಿಜವಾದ ಹೀರೊ’ ಎಂದು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor