ಭಾರತಕ್ಕೆ ಹೊಸ ವಾಣಿಜ್ಯ ಮಾರ್ಗದ ಪ್ರಸ್ತಾವನೆ ಮುಂದಿರಿಸಿದ ಪುಟಿನ್
Photo Credit : PTI
ಮಾಸ್ಕೊ, ಅ. 2: ರಶ್ಯ ಮತ್ತು ಭಾರತದ ನಡುವೆ ಆರ್ಥಿಕ ಸಹಕಾರಕ್ಕಾಗಿ ಬಹಳ ಅವಕಾಶಗಳಿವೆ ಎಂದು ರಶ್ಯ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದು, ಭಾರತದೊಂದಿಗೆ ಹೊಸ ವಾಣಿಜ್ಯ ಮತ್ತು ಸಾರಿಗೆ ಮಾರ್ಗಗಳನ್ನು ಆರಂಭಿಸುವ ಪ್ರಸ್ತಾವನೆ ಇಟ್ಟಿದ್ದಾರೆ. ‘ಅಂತರರಾಷ್ಟ್ರೀಯ ಉತ್ತರ-ದಕ್ಷಿಣ ಸಾರಿಗೆ ಮಾರ್ಗ’ ಸೇರಿದಂತೆ ಹೊಸ ಅಂತರರಾಷ್ಟ್ರೀಯ ಹಡಗು ರವಾನೆ ಹಾಗೂ ಸಂಪರ್ಕ ಮಾರ್ಗಗಳನ್ನು ಜಂಟಿಯಾಗಿ ಬಳಸುವ ಕುರಿತು ರಶ್ಯವು ಭಾರತದೊಂದಿಗೆ ಮಾತುಕತೆ ನಡೆಸುತ್ತಿದೆ. ನಾವು ಈಗಾಗಲೇ ಚೀನಾದ ಕಂಟೇನರ್ ಹಡಗು ಮತ್ತು ದಕ್ಷಿಣ ಕೊರಿಯಾದ ಹಡಗಿನ ಪ್ರಾಯೋಗಿಕ ಸಂಚಾರ ನಡೆಸಿದ್ದೇವೆ ಹಾಗೂ ನಮ್ಮ ಭಾರತೀಯ ಸ್ನೇಹಿತರೊಂದಿಗೂ ಮಾತುಕತೆ ನಡೆಸುತ್ತಿದ್ದೇವೆ. ಆದ್ದರಿಂದ, ಭರವಸೆಯ ದಾರಿಯಾಗಿರುವ ಈ ಅಂತರರಾಷ್ಟ್ರೀಯ ಮಾರ್ಗಗಳನ್ನು ಜಂಟಿಯಾಗಿ ಬಳಸುವುದನ್ನು ನಾವು ಬೆಂಬಲಿಸುತ್ತೇವೆ ಎಂದು ಪುಟಿನ್ ಹೇಳಿದ್ದಾರೆ.