Screengrab : X

ಜೆರುಸಲೇಂ, ಅ. 2: ಇಸ್ರೇಲ್ ನ ರಾಷ್ಟ್ರೀಯ ಭದ್ರತಾ ಸಚಿವ ಇಟಾಮರ್ ಬೆನ್ಗ್ವಿರ್ ಅವರು ‘ಎಕ್ಸ್’ನಲ್ಲಿ ಹಂಚಿಕೊಂಡಿದ್ದ ವೀಡಿಯೊವನ್ನು ಚುನಾವಣಾ ಪ್ರಚಾರ ಎಂದು ಪರಿಗಣಿಸಿ, ದೇಶದ ಚುನಾವಣಾ ಆಯೋಗವು ಅವರಿಗೆ ದಂಡ ವಿಧಿಸಿದೆ. ಈ ವೀಡಿಯೊದಲ್ಲಿ ಅವರು ಫೆಲೆಸ್ತೀನ್ನ ಕೈದಿಯೊಬ್ಬರಿಗೆ ‘ಮರಣದಂಡನೆ ವಿಧಿಸುವುದಾಗಿ’ ಬೆದರಿಕೆ ಹಾಕಿದ್ದರು.

ಇಸ್ರೇಲಿ ಜೈಲಿನಲ್ಲಿರುವ ಫೆಲೆಸ್ತೀನ್ ಕೈದಿಗೆ ಬೆದರಿಕೆ ಒಡ್ಡಿದ ವೀಡಿಯೊವನ್ನು ಬೆನ್ಗ್ವಿರ್ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದು, ಬಳಿಕ ಅದನ್ನು ಡಿಲೀಟ್ ಮಾಡಿದ್ದರು. ಆದರೆ ಅದರ ದೃಶ್ಯಾವಳಿಗಳು ಇತರ ಸಾಮಾಜಿಕ ಮಾಧ್ಯಮದಲ್ಲಿ ಲಭ್ಯವಿದೆ. ಬೆನ್ಗ್ವಿರ್ ಅವರು ಈ ವೀಡಿಯೊವನ್ನು ಡಿಲೀಟ್ ಮಾಡಬೇಕು ಮತ್ತು ಈ ವೀಡಿಯೊ ವಿರುದ್ಧ ಅರ್ಜಿ ಸಲ್ಲಿಸಿದ್ದ ಎರಡು ಮಾನವ ಹಕ್ಕುಗಳ ಸಂಸ್ಥೆಗಳಿಗೆ ತಲಾ 10,000 ಶೆಕೆಲ್ ಗಳನ್ನು (ಸುಮಾರು 3 ಲಕ್ಷ ರೂಪಾಯಿ) ಪಾವತಿಸಬೇಕು ಎಂದು ಕೇಂದ್ರ ಚುನಾವಣಾ ಸಮಿತಿಯು ಗುರುವಾರ ಆದೇಶಿಸಿದೆ.

ಆಯೋಗವು ಬೆನ್ ಗ್ವಿರ್ ಅವರಿಗೆ ದಂಡ ವಿಧಿಸಿದ್ದು, ವೀಡಿಯೊದ ವಿಷಯದ ಕಾರಣಕ್ಕಲ್ಲ, ಬದಲಿಗೆ ಅಕ್ಟೋಬರ್ 27ರ ಚುನಾವಣೆಗೆ ಈ ವೀಡಿಯೊ ಪ್ರಕಟಿಸುವ ಮೂಲಕ ಪ್ರಚಾರ ನಡೆಸಿ ಚುನಾವಣಾ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂಬ ಕಾರಣಕ್ಕಾಗಿ ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor