ಡೊನಾಲ್ಡ್ ಟ್ರಂಪ್ | Photo Credit : AP 

ಜೆರುಸಲೇಂ, ಅ. 2: ಇಸ್ರೇಲ್ಗೆ ಪ್ರಯಾಣಿಸುತ್ತಿದ್ದ ವಿಮಾನವನ್ನು ಪತನಗೊಳಿಸಲು ಯತ್ನಿಸಿದ ಸಹ-ಪೈಲಟ್ನೊಂದಿಗೆ ಇರಾನ್ಗೆ ಯಾವುದೇ ಸಂಪರ್ಕವಿರುವುದು ಕಂಡುಬಂದರೆ, ವಿಮಾನದಲ್ಲಿದ್ದ 174 ಮಂದಿಯ ಜೀವಕ್ಕೆ ಅಪಾಯ ತಂದೊಡ್ಡಿದ್ದಕ್ಕಾಗಿ ಇರಾನ್ ಮೇಲೆ ಅತ್ಯಂತ ಪ್ರಬಲವಾದ ದಾಳಿ ನಡೆಸಲಾಗುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ಹೇಳಿದ್ದಾರೆ.

ವಿಮಾನದ ಮೇಲೆ ದಾಳಿ ನಡೆಸಿದ ಪೈಲಟ್ ಹಾಗೂ ಇರಾನ್ ನಡುವೆ ಏನಾದರೂ ಸಂಪರ್ಕವಿದೆಯೇ ಎಂದು ಶ್ವೇತಭವನದಲ್ಲಿ ವರದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಟ್ರಂಪ್, ‘ನಾನು ಕೇಳುತ್ತಿರುವ ಮಾಹಿತಿಯ ಪ್ರಕಾರ ಉತ್ತರ ‘ಹೌದು’ ಎಂದೇ ತೋರುತ್ತದೆ. ಆದರೆ ನಾವು ಪ್ರಸ್ತುತ ಇದರ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ. ದಾಳಿಯ ಹಿಂದೆ ಇರಾನ್ ಇರುವುದು ದೃಢಪಟ್ಟರೆ ಅವರ ಮೇಲೆ ಅತ್ಯಂತ ಪ್ರಬಲ ದಾಳಿ ನಡೆಯಲಿದೆ, ಚಿಂತಿಸಬೇಡಿ’ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor