×
Ad

ಪಾಕ್ ಮಾಜಿ ವಿದೇಶಾಂಗ ಸಚಿವ ಖುರೇಷಿ ಬಂಧನ

Update: 2023-08-19 23:15 IST

Shah Mehmood Qureshi (IANS)

ಇಸ್ಲಮಾಬಾದ್: ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ, ಉಚ್ಛಾಟಿತ ಪ್ರಧಾನಿ ಇಮ್ರಾನ್ಖಾನ್ ಅವರ ಆಪ್ತ ಸಹಾಯಕ ಶಾ ಮುಹಮ್ಮದ್ ಖುರೇಷಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಶನಿವಾರ ಪಿಟಿಐ ಪಕ್ಷದ ವಕ್ತಾರ ಝುಲ್ಫಿ ಬುಖಾರಿಯನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

66 ವರ್ಷದ ಖುರೇಷಿಯನ್ನು ಇಸ್ಲಮಾಬಾದ್ ಪೊಲೀಸರು ಬೆಳಿಗ್ಗೆ ಬಂಧಿಸಿ ಅಜ್ಞಾತ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ ಎಂದು ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್(ಪಿಟಿಐ) ಪಕ್ಷದ ಮೂಲಗಳು ಹೇಳಿವೆ. ವಿರೋಧ ಪಕ್ಷದ ಮುಖಂಡರಾಗಿದ್ದ ಖುರೇಷಿ ಪಿಟಿಐ ಪಕ್ಷದ ಉಪಾಧ್ಯಕ್ಷರಾಗಿದ್ದರು.

ನವೆಂಬರ್ ಆರಂಭದಲ್ಲಿ ನಡೆಯಬೇಕಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಯಾವುದೇ ವಿಳಂಬವಾದರೂ ಅದನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗುವುದು ಎಂದು ಬಂಧನಕ್ಕೂ ಮುನ್ನ ಸುದ್ಧಿಗೋಷ್ಟಿಯಲ್ಲಿ ಖುರೇಷಿ ಎಚ್ಚರಿಕೆ ನೀಡಿದ್ದರು

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News