×
Ad

ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಜಾಮೀನು ರದ್ದು

Update: 2023-08-12 23:30 IST

ಇಸ್ಲಮಾಬಾದ್ : ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಗೆ 7 ಪ್ರಕರಣಗಳಲ್ಲಿ ನೀಡಿದ್ದ ಮಧ್ಯಂತರ ಜಾಮೀನನ್ನು ಭಯೋತ್ಪಾದನೆ ನಿಗ್ರಹ ನ್ಯಾಯಾಲಯ ರದ್ದುಗೊಳಿಸಿದೆ ಎಂದು `ದಿ ನ್ಯೂಸ್ ಇಂಟರ್ನ್ಯಾಷನಲ್' ಶನಿವಾರ ವರದಿ ಮಾಡಿದೆ.

ಶಿಕ್ಷೆಗೊಳಗಾದ ಆರೋಪಿಯ ಜಾಮೀನು ಅರ್ಜಿಗಳನ್ನು ಸ್ವೀಕರಿಸಲು ಕಾನೂನಿನಲ್ಲಿ ಯಾವುದೇ ಅವಕಾಶವಿಲ್ಲ ಎಂದು ವಿಶೇಷ ಅಭಿಯೋಜಕರು ವಾದಿಸಿದರು. ಆರೋಪಿ ಜೈಲಿನಲ್ಲಿಯೇ ಇರುವುದರಿಂದ ನ್ಯಾಯಾಲಯ ಅಗತ್ಯವಿದ್ದಾಗ ಅವರನ್ನು ಕರೆಸಿಕೊಳ್ಳಬಹುದು. ಆದ್ದರಿಂದ ಜಾಮೀನು ಮುಂದುವರಿಸಬೇಕು ಎಂದು ಇಮ್ರಾನ್ ಪರ ವಕೀಲರು ವಾದಿಸಿದರು.

ಆರೋಪಿ ಜೈಲಿನ ಹೊರಗೆ ಇದ್ದಾಗಲೂ ವಿಚಾರಣೆಗೆ ಹಾಜರಾಗುತ್ತಿರಲಿಲ್ಲ ಎಂದು ಹೇಳಿದ ನ್ಯಾಯಾಧೀಶರು 7 ಪ್ರಕರಣಗಳ ಮಧ್ಯಂತರ ಜಾಮೀನು ರದ್ದುಗೊಳಿಸಿ ತೀರ್ಪು ನೀಡಿದರು ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News