×
Ad

ಪುಟಿನ್ ರಿಂದ ವಜಾಗೊಂಡ ಕೆಲವೇ ಗಂಟೆಗಳಲ್ಲಿ ರಷ್ಯಾದ ಮಾಜಿ ಸಚಿವ ಆತ್ಮಹತ್ಯೆ!

Update: 2025-07-08 06:10 IST

ರೋಮನ್ ಸ್ಟಾರೊವೊಯ್ಟ್

ಮಾಸ್ಕೋ: ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ವಜಾಗೊಳಿಸಿದ ಕೆಲವೇ ಗಂಟೆಗಳ ನಂತರ, ಮಾಜಿ ಸಾರಿಗೆ ಸಚಿವ ರೋಮನ್ ಸ್ಟಾರೊವೊಯ್ಟ್ ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ರೋಮನ್ ಸ್ಟಾರೊವೊಯ್ಟ್ ಅವರನ್ನು ವಜಾಗೊಳಿಸುವ ಘೋಷಣೆ ಪ್ರಕಟವಾದ ಬಳಿಕ, ಮಾಸ್ಕೋದಲ್ಲಿ ಅವರೇ ಸ್ವತಃ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಮೃತದೇಹವನ್ನು ಕಾರಿನೊಳಗೆ ಪತ್ತೆಹಚ್ಚಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳನ್ನು ಉಲ್ಲೇಖಿಸಿ ಎಎಫ್‌ಪಿ ಸುದ್ದಿಸಂಸ್ಥೆಯು ವರದಿ ಮಾಡಿದೆ.

"ಇಂದು ರಷ್ಯಾ ಒಕ್ಕೂಟದ ಮಾಜಿ ಸಾರಿಗೆ ಸಚಿವ ರೋಮನ್ ಸ್ಟಾರೊವೊಯ್ಟ್ ಅವರ ಮೃತದೇಹ, ಗುಂಡೇಟಿನ ಗಾಯದೊಂದಿಗೆ ಅವರ ಕಾರಿನಲ್ಲಿ ಪತ್ತೆಯಾಗಿದೆ," ಎಂದು ರಷ್ಯಾದ ತನಿಖಾ ಸಮಿತಿ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ.

ಸ್ಟಾರೊವೊಯ್ಟ್ ಅವರನ್ನು ವಜಾಗೊಳಿಸಲು ವಿಶೇಷ ಕಾರಣವನ್ನು ರಷ್ಯಾದ ಸರ್ಕಾರ ಸ್ಪಷ್ಟಪಡಿಸಿಲ್ಲ. ಮಾಸ್ಕೋ ಟೈಮ್ಸ್ ವರದಿ ಪ್ರಕಾರ, ಸ್ಟಾರೊವೊಯ್ಟ್ ಅವರನ್ನು ಪುಟಿನ್ ನೇಮಕ ಮಾಡಿ ಕೇವಲ ಒಂದು ವರ್ಷವಾಗಿತ್ತು.

ಉಪ ಸಾರಿಗೆ ಸಚಿವ ಆಂಡ್ರೇ ನಿಕಿಟಿನ್ ಅವರನ್ನು ಸ್ಟಾರೊವೊಯ್ಟ್ ಅವರ ಸ್ಥಾನಕ್ಕೆ, ಹಂಗಾಮಿ ಸಾರಿಗೆ ಸಚಿವರನ್ನಾಗಿ ನೇಮಕ ಮಾಡಲಾಗಿದೆ ಎಂದು ತಿಳಿದುಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News