×
Ad

ಫ್ರಾನ್ಸ್: ಪೊಲೀಸ್ ವಾಹನಕ್ಕೆ ಡಿಕ್ಕಿ ; ಯುವಕ ಮೃತ್ಯು

Update: 2023-09-07 21:11 IST

ಸಾಂದರ್ಭಿಕ ಚಿತ್ರ

ಪ್ಯಾರಿಸ್: ಪೊಲೀಸರಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಬೈಕ್ ಸವಾರನೊಬ್ಬ ಪೊಲೀಸ್ ವಾಹನಕ್ಕೆ ಡಿಕ್ಕಿಯಾಗಿ ಮೃತಪಟ್ಟಿರುವ ಘಟನೆ ಪ್ಯಾರಿಸ್‍ನ ಪಶ್ಚಿಮದಲ್ಲಿರುವ ಎಲಾನ್‍ಕೋರ್ಟ್ ನಗರದಲ್ಲಿ ವರದಿಯಾಗಿದೆ.

ತಪಾಸಣೆ ಸಂದರ್ಭ 16 ವರ್ಷದ ಬೈಕ್ ಸವಾರ ಪೊಲೀಸರ ಸೂಚನೆಯನ್ನು ಮೀರಿ ಅಲ್ಲಿಂದ ವೇಗವಾಗಿ ಬೈಕ್ ಚಲಾಯಿಸಿದ್ದಾನೆ. ಆಗ ಪೊಲೀಸರು ಆತನ ಬೆನ್ನಟ್ಟಿದ್ದಾರೆ. ಅಡ್ಡರಸ್ತೆಯ ಬಳಿ ಎದುರಿನಿಂದ ಬಂದ ಮತ್ತೊಂದು ಪೊಲೀಸ್ ವಾಹನಕ್ಕೆ ಬೈಕ್ ಡಿಕ್ಕಿಯಾಗಿ ಸವಾರ ಗಂಭೀರ ಗಾಯಗೊಂಡಿದ್ದು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇಬ್ಬರು ಪೊಲೀಸರನ್ನು ಬಂಧಿಸಲಾಗಿದ್ದು ತನಿಖೆಗೆ ಆದೇಶಿಸಲಾಗಿದೆ. ಜನತೆ ಯಾವುದೇ ಗಾಳಿಸುದ್ದಿಗೆ ಕಿವಿಗೊಡದೆ ಶಾಂತಿ ಕಾಪಾಡುವಂತೆ ಫ್ರಾನ್ಸ್ ಸರಕಾರ ಮನವಿ ಮಾಡಿದೆ.

ಜೂನ್‍ನಲ್ಲಿ ಟ್ರಾಫಿಕ್ ಪೊಲೀಸರ ಕಾರ್ಯಾಚರಣೆಯಲ್ಲಿ 17 ವರ್ಷದ ಯುವಕ ಸಾವನ್ನಪ್ಪಿದ ಬಳಿಕ ಫ್ರಾನ್ಸ್‍ನಲ್ಲಿ ಹಲವು ದಿನ ವ್ಯಾಪಕ ಪ್ರತಿಭಟನೆ ನಡೆದಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News