×
Ad

ಫೆಲೆಸ್ತೀನ್ ಅನ್ನು ಅಧಿಕೃತವಾಗಿ ರಾಷ್ಟ್ರವೆಂದು ಗುರುತಿಸುವುದಾಗಿ ಫ್ರಾನ್ಸ್ ಘೋಷಣೆ

Update: 2025-07-25 11:35 IST

ಸಾಂದರ್ಭಿಕ ಚಿತ್ರ (credit: AFP)

ಪ್ಯಾರಿಸ್ : ಗಾಝಾದಲ್ಲಿ ಹಸಿವಿನಿಂದ ಬಳಲುತ್ತಿರುವ ಜನರ ಬಗ್ಗೆ ಜಾಗತಿಕವಾಗಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿರುವ ಮಧ್ಯೆ ಫೆಲೆಸ್ತೀನ್‌ನ್ನು ಅಧಿಕೃತವಾಗಿ ರಾಷ್ಟ್ರವೆಂದು ಗುರುತಿಸುವುದಾಗಿ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಘೋಷಿಸಿದ್ದಾರೆ.

ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಫ್ರಾನ್ಸ್ ಅಧಿಕೃತವಾಗಿ ಫೆಲೆಸ್ತೀನ್‌ನ್ನು ರಾಷ್ಟ್ರವನ್ನಾಗಿ ಗುರುತಿಸಲಿದೆ ಎಂದು ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ತಿಳಿಸಿದ್ದಾರೆ.

ಈ ಕುರಿತು ಎಕ್ಸ್ ಮತ್ತು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿರುವ ಮ್ಯಾಕ್ರನ್, ಮಧ್ಯಪ್ರಾಚ್ಯದಲ್ಲಿ ನ್ಯಾಯಯುತ ಮತ್ತು ಶಾಶ್ವತ ಶಾಂತಿಗೆ ತಮ್ಮ ಐತಿಹಾಸಿಕ ಬದ್ಧತೆ ದೃಷ್ಟಿಯಿಂದ ಫೆಲೆಸ್ತೀನ್‌ನ್ನು ರಾಷ್ಟ್ರವನ್ನಾಗಿ ಗುರುತಿಸುತ್ತೇವೆ ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News