ಜಿ20 ಶೃಂಗಸಭೆ | AI ದುರುಪಯೋಗ ತಡೆಗೆ ಪ್ರಧಾನಿ ಮೋದಿ ಆಗ್ರಹ
Update: 2025-11-23 21:56 IST
ನರೇಂದ್ರ ಮೋದಿ | PC : PTI \ AP
ಜೊಹಾನ್ಸ್ ಬರ್ಗ್: ರವಿವಾರ ನಡೆದ ಮೂರನೇ ಅಧಿವೇಶನದಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ` ಡೀಪ್‍ಫೇಕ್ ಪ್ರಕ್ರಿಯೆಯಲ್ಲಿ AI(ಕೃತಕ ಬುದ್ಧಿಮತ್ತೆ) ಬಳಕೆಯ ಮೇಲೆ ಕಟ್ಟುನಿಟ್ಟಾದ ನಿರ್ಬಂಧಗಳಿಗೆ ಆಗ್ರಹಿಸಿದ್ದಾರೆ.
AI ದುರುಪಯೋಗವನ್ನು ತಡೆಗಟ್ಟುವ ಜಾಗತಿಕ ಸಂಯೋಜನೆಯು ಮಾನವ ಮೇಲ್ವಿಚಾರಣೆ, ವಿನ್ಯಾಸ ಮತ್ತು ಪಾರದರ್ಶಕತೆಯಲ್ಲಿ ಸುರಕ್ಷತೆಯ ಮೂಲ ತತ್ವವನ್ನು ಆಧರಿಸಿರಬೇಕು ಎಂದು ಪ್ರಧಾನಿ ಮೋದಿ ಪ್ರತಿಪಾದಿಸಿದ್ದಾರೆ.