ಗಾಝಾದಲ್ಲಿ ಮಾನವೀಯ ವಿರಾಮಕ್ಕೆ ವಿಶ್ವಸಂಸ್ಥೆ ಸ್ವಾಗತ
Update: 2025-07-27 20:29 IST
PC : news.un.org
ಜಿನೆವಾ, ಜು.27: ಗಾಝಾದಲ್ಲಿ ಮಾನವೀಯ ವಿರಾಮ ಮತ್ತು ಮಾನವೀಯ ನೆರವನ್ನು ಹೊತ್ತು ತರುವ ವಾಹನಗಳಿಗೆ ಸುರಕ್ಷಿತ ಮಾರ್ಗವನ್ನು ಖಾತರಿಗೊಳಿಸುವ ಘೋಷಣೆಯನ್ನು ಸ್ವಾಗತಿಸುವುದಾಗಿ ವಿಶ್ವಸಂಸ್ಥೆ ತುರ್ತು ನೆರವು ವಿಭಾಗದ ಮುಖ್ಯಸ್ಥ ಟಾಮ್ ಫ್ಲೆಚರ್ ಹೇಳಿದ್ದಾರೆ.
ಸಾಧ್ಯವಾದಷ್ಟು ಹಸಿವಿನಿಂದ ಬಳಲುತ್ತಿರುವ ಜನರನ್ನು ತಲುಪಲು ವಿಶ್ವಸಂಸ್ಥೆ ಪ್ರಯತ್ನಿಸಲಿದ್ದು ನಮ್ಮ ತಂಡದ ಜೊತೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದವರು `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
ಗಾಝಾದಲ್ಲಿನ ಪರಿಸ್ಥಿತಿ ದುರಂತದ ಅಂಚಿನಲ್ಲಿದ್ದು ದಿನೇ ದಿನೇ ಹದಗೆಡುತ್ತಿದೆ. ಹಸಿವಿನ ಬಿಕ್ಕಟ್ಟು ಮತ್ತು ಅಪೌಷ್ಠಿಕತೆಯ ಸಮಸ್ಯೆ ತೀವ್ರಗೊಳ್ಳುತ್ತಿದ್ದು ಅನಾರೋಗ್ಯದ ಅಪಾಯ ಹೆಚ್ಚುತ್ತಿದೆ ಎಂದು ವಿಶ್ವಸಂಸ್ಥೆಯ ಮಾನವೀಯ ವ್ಯವಹಾರಗಳ ಸಮನ್ವಯ ಏಜೆನ್ಸಿ (ಒಸಿಎಚ್‍ಎ) ಶುಕ್ರವಾರ ಎಚ್ಚರಿಕೆ ನೀಡಿತ್ತು.