ಗಾಝಾ: ಬಸ್ಸಿನ ಮೇಲೆ ಇಸ್ರೇಲ್ ಗುಂಡಿನ ದಾಳಿಯಲ್ಲಿ 9 ಮಂದಿ ಮೃತ್ಯು
Update: 2025-10-18 20:45 IST
Photo Credit : NDTV
ಗಾಝಾ, ಅ.18: ಗಾಝಾ ಪಟ್ಟಿಯಲ್ಲಿ ಸ್ಥಳಾಂತರಗೊಂಡವರು ಪ್ರಯಾಣಿಸುತ್ತಿದ್ದ ಬಸ್ಸಿನ ಮೇಲೆ ಇಸ್ರೇಲ್ ಪಡೆಗಳು ನಡೆಸಿದ ಗುಂಡಿನ ದಾಳಿಯಲ್ಲಿ 9 ಮಂದಿ ಸಾವನ್ನಪ್ಪಿರುವುದಾಗಿ ಗಾಝಾ ರಕ್ಷಣಾ ಏಜೆನ್ಸಿ ಶನಿವಾರ ವರದಿ ಮಾಡಿದೆ.
ಜೆಯ್ಟುನ್ ನಗರದ ಪೂರ್ವದಲ್ಲಿ ಶುಕ್ರವಾರ ಸಂಜೆ ಘಟನೆ ನಡೆದಿದ್ದು 9 ಮಂದಿ ಸಾವನ್ನಪ್ಪಿದ್ದಾರೆ ಎಂದು ಗಾಝಾ ರಕ್ಷಣಾ ಏಜೆನ್ಸಿಯ ವಕ್ತಾರರನ್ನು ಉಲ್ಲೇಖಿಸಿ ಎಎಫ್ಪಿ ಸುದ್ದಿಸಂಸ್ಥೆ ಶನಿವಾರ ವರದಿ ಮಾಡಿದೆ.
ಹಮಾಸ್ ಜೊತೆಗಿನ ಕದನ ವಿರಾಮ ಒಪ್ಪಂದಡಿ ಇಸ್ರೇಲಿ ಪಡೆಗಳನ್ನು ನೆಲೆಗೊಳಿಸಿರುವ `ಹಳದಿ ಗೆರೆ'ಯನ್ನು ದಾಟಿ ಬಂದ ಬಸ್ಸನ್ನು ಗುರುತಿಸಿ ಎಚ್ಚರಿಕೆ ನೀಡಿದರೂ ಅಪಾಯಕಾರಿಯಾಗಿ ಮುನ್ನುಗ್ಗಿದಾಗ ಆತ್ಮರಕ್ಷಣೆಗಾಗಿ ಪಡೆಗಳು ಗುಂಡು ಹಾರಿಸಿವೆ ಎಂದು ಇಸ್ರೇಲಿ ಮಿಲಿಟರಿ ಶನಿವಾರ ಪ್ರತಿಕ್ರಿಯೆ ನೀಡಿದೆ.