×
Ad

ಇಸ್ರೇಲನ್ನು ಮಂಡಿಯೂರಿಸಿದ ಗಾಝಾ: ಇರಾನ್‌ನ ಸರ್ವೋಚ್ಚ ನಾಯಕ ಅಯಾತುಲ್ಲಾ ಅಲಿ ಖಾಮಿನೈ

Update: 2025-01-28 23:35 IST

ಟೆಹರಾನ್: ಪುಟ್ಟ ಗಾಝಾ ಪ್ರದೇಶವು ಇಸ್ರೇಲನ್ನು ಮಂಡಿಯೂರುವಂತೆ ಮಾಡಿದೆ ಎಂದು ಇರಾನ್‌ ನ ಸರ್ವೋಚ್ಚ ನಾಯಕ ಅಯಾತುಲ್ಲಾ ಅಲಿ ಖಾಮಿನೈ ಮಂಗಳವಾರ ತಿಳಿಸಿದ್ದಾರೆ.

ಟೆಹರಾನ್‌ನಲ್ಲಿ ಅಧಿಕಾರಿಗಳ ಜೊತೆ ಮಾತನಾಡಿದ ಅವರು ಹಮಾಸ್ ಹಾಗೂ ಇಸ್ರೇಲ್ ನಡುವೆ ಕದನವಿರಾಮವನ್ನು ಪ್ರಸ್ತಾವಿಸುತ್ತಾ, ಪುಟ್ಟದಾದ ಗಾಝಾವು ತನ್ನೆದುರು ಅಮೆರಿಕ ಬೆಂಬಲಿತ ಯೆಹೂದ್ಯಪಾರಮ್ಯವಾದಿ (ಝಿಯೋನಿಸ್ಟ್) ಆಡಳಿತವು ಮಂಡಿಯೂರುವಂತೆ ಮಾಡಿದೆ ಎಂದು ಹೇಳಿದರು.

ಈ ಮಧ್ಯೆ ಫೆಲೆಸ್ತೀನ್ ನಾಗರಿಕರನ್ನು ಗಾಝಾದಿಂದ ಈಜಿಪ್ಟ್ ಅಥವಾ ಜೋರ್ಡಾನ್‌ನಂತಹ ಸ್ಥಳಗಳಲ್ಲಿ ನೆಲೆಸುವಂತೆ ಮಾಡುವ ಟ್ರಂಪ್ ಸರಕಾರದ ಯೋಜನೆಯನ್ನು ಇರಾನ್‌ನ ವಿದೇಶಾಂಗ ಇಲಾಖೆಯ ವಕ್ತಾರ ಇಸ್ಮಾಯೀಲ್ ಬಾಖಾಯೆಯಿ ಖಂಡಿಸಿದ್ದಾರೆ.

ಗಾಝಾವು ಫೆಲೆಸ್ತೀನಿಯರ ತಾಯ್ನಾಡಾಗಿದೆ ಹಾಗೂ ಅಲ್ಲಿಯೇ ಉಳಿದುಕೊಳ್ಳಲು ಅವರು ಅಪಾರವಾದ ಬೆಲೆಯನ್ನು ತೆತ್ತಿದ್ದಾರೆಂದು ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News