×
Ad

ಗಾಝಾ | ಗ್ರೆನೇಡ್ ದಾಳಿಯಲ್ಲಿ ಇಸ್ರೇಲ್‌ ನ ಇಬ್ಬರು ಯೋಧರು ಮೃತ್ಯು

Update: 2025-05-10 21:07 IST

PC | NDTV

ಜೆರುಸಲೇಂ: ದಕ್ಷಿಣ ಗಾಝಾ ಪಟ್ಟಿಯಲ್ಲಿ ನಡೆದ ಪ್ರತ್ಯೇಕ ಘಟನೆಗಳಲ್ಲಿ ಇಸ್ರೇಲ್‌ ನ ಇಬ್ಬರು ಯೋಧರು ಸಾವನ್ನಪ್ಪಿದ್ದು ಇತರ ಮೂವರು ಗಾಯಗೊಂಡಿರುವುದಾಗಿ ಇಸ್ರೇಲಿ ಮಿಲಿಟರಿ ಹೇಳಿದೆ.

ರಫಾ ನಗರದಲ್ಲಿ ಇಸ್ರೇಲಿ ಪಡೆಗಳು ಉಳಿದುಕೊಂಡಿದ್ದ ಕಟ್ಟಡದ ಮೇಲೆ ಹಮಾಸ್ ಹೋರಾಟಗಾರರು ರಾಕೆಟ್ ಚಾಲಿತ ಗ್ರೆನೇಡ್ ಪ್ರಯೋಗಿಸಿದಾಗ ಓರ್ವ ಯೋಧ ಸಾವನ್ನಪ್ಪಿದ್ದು ಇತರ ಇಬ್ಬರು ಗಂಭೀರ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಹೆಲಿಕಾಪ್ಟರ್ ಮೂಲಕ ಮಧ್ಯ ಇಸ್ರೇಲ್‌ ನ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ರಫಾದಲ್ಲಿ ನಡೆದ ಮತ್ತೊಂದು ದಾಳಿಯಲ್ಲಿ ಟ್ಯಾಂಕ್ ಮೇಲೆ ಐಇಡಿ(ಸುಧಾರಿತ ಸ್ಫೋಟಕ ಸಾಧನ) ಬಳಸಿ ನಡೆಸಿದ ದಾಳಿಯಲ್ಲಿ ಓರ್ವ ಯೋಧ ಸಾವನ್ನಪ್ಪಿದ್ದು ಓರ್ವ ಗಾಯಗೊಂಡಿದ್ದು ಗಾಝಾದಲ್ಲಿ ನಡೆಯುತ್ತಿರುವ ಕಾರ್ಯಾಚರಣೆಯಲ್ಲಿ ಮೃತಪಟ್ಟ ಯೋಧರ ಸಂಖ್ಯೆ 418ಕ್ಕೆ ತಲುಪಿದ ಎಂದು ಇಸ್ರೇಲ್ ಮಿಲಿಟರಿ ಹೇಳಿದೆ. ಹಮಾಸ್ ದಾಳಿಯ ಹೊಣೆಯನ್ನು ವಹಿಸಿಕೊಂಡಿದ್ದು ಪೂರ್ವ ರಫಾದಲ್ಲಿನ ಮನೆಯೊಂದರಲ್ಲಿದ್ದ 12 ಇಸ್ರೇಲಿ ಯೋಧರ ಮೇಲೆ ಹೊಂಚು ದಾಳಿ ನಡೆಸಿರುವುದಾಗಿ ಟೆಲಿಗ್ರಾಮ್‍ನಲ್ಲಿ ಪೋಸ್ಟ್ ಮಾಡಿದೆ. ಈ ಮಧ್ಯೆ, ಗಾಝಾದಲ್ಲಿ ಇಸ್ರೇಲ್ ಭದ್ರತಾ ಪಡೆಗಳ ಕಾರ್ಯಾಚರಣೆ ತೀವ್ರಗೊಂಡಿದ್ದು ಹಮಾಸ್‍ನ ಶಸ್ತ್ರಾಸ್ತ್ರ ಡಿಪೋ ಹಾಗೂ ಇತರ ಮೂಲಸೌಕರ್ಯಗಳನ್ನು ಗುರಿಯಾಗಿಸಿ ದಾಳಿ ನಡೆಸುತ್ತಿರುವುದಾಗಿ ಇಸ್ರೇಲ್ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News